ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಹೆಚ್ಚಾಗಿದ್ದು ನಿಯಮ ಉಲ್ಲಂಘನೆ, ಟ್ರಾಫಿಕ್ ಸಲಹೆಗಳನ್ನು ಪಾಲಿಸದೇ ಇರುವುದು ಸೇರಿದಂತೆ ಒಟ್ಟಾರೆಯಾಗಿ ವಾಹನ ಚಲಾಯಿಸುವ ವಾಹನ ಸವಾರರು ಇದ್ದಾರೆ, ಅದಕ್ಕಾಗಿ ಇಂತಹ ವಾಹನ ಸವಾರರನ್ನು ಪತ್ತೆಹಚ್ಚಲು ಟ್ರಾಫಿಕ್ ಸಿಬ್ಬಂದಿ ಗಳನ್ನು ನೇಮಿಸಲಾಗಿದೆ.
ಹಾಗಾಗಿ ವಾಹನ ಸವಾರರಿಗೆ ಪರಿಪಾಠ ಹೇಳುವ ಟ್ರಾಫಿಕ್ ಪೊಲೀಸರು (Traffic Police) ಕೂಡ ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕು. ಇವರು ಕೂಡ ಕೆಲವೊಂದು ನಿಯಮಗಳನ್ನು ಪಾಲನೇ ಮಾಡುವುದು ಕಡ್ಡಾಯವಾಗಿದ್ದು ಇದೀಗ ಸರಕಾರ ಹೊಸ ನಿಯಮವನ್ನು (Traffic Police Rules) ಜಾರಿ ಮಾಡಿದೆ.
ಕ್ಯಾಪ್ ಧರಿಸೋದು ಕಡ್ಡಾಯ:
ಸಂಚಾರ ಪೊಲೀಸರು ಕರ್ತವ್ಯದ ಎಲ್ಲ ಸ್ಥಳಗಳಲ್ಲೂ ಹಾಗೂ ಸಂದರ್ಭಗಳಲ್ಲೂ ಅತ್ಯಂತ ಪಾರದರ್ಶಕತೆಯಲ್ಲಿ ಇರುವುದು ಅಗತ್ಯ. ಹಾಗೆಯೇ ಟ್ರಾಫಿಕ್ ಪೋಲೀಸರು ಕ್ಯಾಪ್ ಧರಿಸೋದು ಕಡ್ಡಾಯವಾಗಿದೆ. ಕ್ಯಾಪ್ ಧರಿಸದೆ ಸಂಚಾರಿ ಪೊಲೀಸರು ಕರ್ತವ್ಯ ನಿರ್ವಹಿಸುವ ಹಾಗಿಲ್ಲ ಎಂದು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಆದೇಶವನ್ನು ನೀಡಿದ್ದಾರೆ.
ಹಾಗೆಯೇ ಸಿಬ್ಬಂದಿಗಳು ಕರ್ತವ್ಯದ ಸಮಯದಲ್ಲಿ ಬೈಕ್ ಮೇಲೆ ಕುಳಿತು ಕೊಳ್ಳಬಾರದು ಎನ್ನುವ ನಿಯಮ ವನ್ನು ಕೂಡ ಜಾರಿ ಮಾಡಲಾಗಿದ್ದು, ಕರ್ತವ್ಯ ನಿರ್ವಹಿಸುವ ವೇಳೆ ಬೈಕ್ ಮೇಲೆ ಕೂರುವ ಹಾಗಿಲ್ಲ ಎಂದು ನಗರ ಎಲ್ಲಾ ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿಗೂ ಈ ಬಗ್ಗೆ ಸೂಚನೆ ಕೂಡ ನೀಡಲಾಗಿದೆ.
ಈ ನಿಯಮವೂ ಜಾರಿ:
ಟ್ರಾಫಿಕ್ ಪೋಲೀಸರು (Traffic Police) ಪ್ರತಿ ದಿನ ಸಂಜೆ ಐದು ಗಂಟೆಯ ನಂತರ ಎಲ್ಲಾ ಪಿ.ಎಸ್.ಐ, ಎ.ಎಸ್.ಐ ಹಾಗೂ ಸಿಬ್ಬಂದಿಗಳು ರಿಪ್ಲೆಕ್ಟಿವ್ ಜಾಕೇಟ್ ಅನ್ನು ಧರಿಸಿ ಕೊಳ್ಳುವ ಬಗ್ಗೆಯೂ ಸೂಚನೆ ನೀಡಲಾಗಿದ್ದು ಈ ಬಗ್ಗೆ ಗಮನ ಹರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ.
ಹಾಗೆಯೇ ಠಾಣೆಯ ಎಲ್ಲಾ ಸಿಬ್ಬಂದಿಗಳು ಕ್ಯಾಪ್ ಧರಿಸಿಕೊಂಡು ಕರ್ತವ್ಯ ನಿರ್ವಹಣೆ ಮಾಡುವುದು. ಠಾಣೆಯ ಎಲ್ಲಾ ಕೋಬ್ರಾ ಸಿಬ್ಬಂದಿಗಳು ಪ್ರತಿ ದಿನ ಎಂಟು ಗಂಟೆಗೆ ಟ್ಯಾಬ್ ಆನ್ ಮಾಡಿಟ್ಟುಕೊಂಡು ಕರ್ತವ್ಯ ಪಾಲಿಸಬೇಕು.ಇನ್ನು ಯಾವುದೇ ಪ್ರಕರಣಗಳನ್ನು ಕಂಡು ಹಿಡಿಯುವಾಗ ಬೈಕ್ ಮೇಲೆ ಕುಳಿತುಕೊಂಡು ಪ್ರಕರಣ ದಾಖಲು ಮಾಡುವಂತಿಲ್ಲ ಎನ್ನುವ ನಿಯಮ ಜಾರಿ ಮಾಡಲಾಗಿದೆ.