ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಸರ್ಕಾರ ರೇಷನ್ ಕಾರ್ಡ್ (Ration Card) ಅನ್ನು ಪ್ರತಿಯೊಬ್ಬ ಭಾರತೀಯರಿಗೂ ಕೂಡ ಸರ್ಕಾರಿ ದಾಖಲೆಯ ರೂಪದಲ್ಲಿ ನೀಡಿದೆ ಹಾಗೂ ವಿಶೇಷವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇವುಗಳನ್ನು ಬಳಸಿಕೊಂಡು ನೀವು ಉಚಿತ ರೇಷನ್ ಕೂಡ ಪಡೆದುಕೊಳ್ಳಬಹುದಾಗಿದೆ.
ಅದರಲ್ಲಿ ವಿಶೇಷವಾಗಿ ಬಡವರ್ಗದ ಜನರಿಗೆ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ವಿತರಣೆ ಮಾಡುವ ಮೂಲಕ ಸರ್ಕಾರದಿಂದ ಸಿಗುವಂತಹ ಉಚಿತ ಆಹಾರ ಧಾನ್ಯಗಳ ಜೊತೆಗೆ ಸರ್ಕಾರಿ ಯೋಜನೆಗಳಲ್ಲಿ ಫಲಾನುಭವಿಗಳಾಗುವಂತಹ ಅವಕಾಶವನ್ನು ಕೂಡ ನೀಡಲಾಗಿದೆ. ಆದರೆ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಬಡವರು ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತಹ ವರ್ಗದ ಜನರು ಬಳಕೆ ಮಾಡುವುದಕ್ಕಿಂತ ಹೆಚ್ಚಾಗಿ ಅನುಕೂಲಸ್ಥರು ಬಳಕೆ ಮಾಡುವುದು ಹೆಚ್ಚಾಗಿ ಕಂಡುಬರುತ್ತಿದೆ.
ವಿಶೇಷವಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಅಂಕಿ ಅಂಶಗಳ ವಿಚಾರದ ಬಗ್ಗೆ ಮಾತನಾಡುವುದಾದರೆ ಈಗಾಗಲೇ ನಮ್ಮ ರಾಜ್ಯದಲ್ಲಿ 10.97 ಲಕ್ಷಕ್ಕೂ ಅಧಿಕ ಜನರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದರಲ್ಲಿ ತೆರಿಗೆ ಪಾವತಿ ಮಾಡುವವರು ಹಾಗೂ ಸರ್ಕಾರಿ ಕೆಲಸದಲ್ಲಿರುವಂತಹ ಜನರು ಕೂಡ ಇದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಇಂತಹ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತಹ ಅನರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಸಿ ನೀಡುವುದಕ್ಕೆ ಹೊರಟಿದೆ ಎಂದು ಹೇಳಬಹುದಾಗಿದೆ.
7.5 ಎಕರೆ ಜಮೀನಿಗಿಂತ ಹೆಚ್ಚಿನ ಭೂಮಿ, ಕಳೆದ ಆರು ತಿಂಗಳಿನಿಂದ ತಮ್ಮ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ರೇಷನ್ ಕಾರ್ಡ್ (Ration Card) ಬಳಕೆ ಮಾಡದವರು, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರಿ ಹೀಗೆ ನಿಯಮಗಳ ಅನುಸಾರವಾಗಿ ಯಾರು ಅನರ್ಹರಾಗಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಬಳಕೆ ಮಾಡುತ್ತಿರುವಂತಹ ಜನರ ವಿರುದ್ಧ ದಂಡ ಸೇರಿದಂತೆ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಕ್ರಮ ಕೈ ತೆಗೆದುಕೊಳ್ಳುವಂತಹ ಸಾಧ್ಯತೆ ಕೂಡ ಇದೆ. ಹೀಗಾಗಿ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಅನ್ನು ನೀವು ಸರೆಂಡರ್ ಮಾಡುವುದು ಉತ್ತಮವಾಗಿರುವ ಕಾರ್ಯವಾಗಿದೆ.