2024 ಹಾಗೂ 25ನೇ ಸಾಲಿನ ಸಹಾಯಧನ ಯೋಜನೆ ಅಡಿಯಲ್ಲಿ ರೈತರು ಕೃಷಿ ಸಂಬಂಧಪಟ್ಟಂತಹ ಮಿನಿ ಟ್ರಾಕ್ಟರ್, ಟಿಲ್ಲರ್ ಹಾಗೂ ಪವರ್ ವೀಡರ್ ಗಳಂತಹ ಕೃಷಿ ಯಂತ್ರೋಪಕರಣಗಳನ್ನು (Agricultural Machinery) ಸಬ್ಸಿಡಿ ದರದಲ್ಲಿ ಪಡೆದುಕೊಳ್ಳುವಂತಹ ಯೋಜನೆಗೆ ಆಹ್ವಾನ ಮಾಡಲಾಗಿದೆ.
ಈ ಯಂತ್ರಗಳು (Agricultural Machinery) ಅಥವಾ ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಸಾಮಾನ್ಯ ವರ್ಗದ ರೈತರಿಗೆ ಖರೀದಿ ಮಾಡುವಂತಹ ವಸ್ತುಗಳ ಮೇಲೆ 50 ಪ್ರತಿಶತ ಸಬ್ಸಿಡಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಾಳದ ರೈತರಿಗೆ 90 ಪ್ರತಿಶತ ಸಬ್ಸಿಡಿಯನ್ನು ನೀಡಲಾಗುತ್ತದೆ ಎನ್ನುವಂತಹ ಅಧಿಕೃತ ಮಾಹಿತಿ ಕೂಡ ಸಿಕ್ಕಿದೆ.
ಈ ಯಂತ್ರಗಳನ್ನು ಪಡೆದುಕೊಳ್ಳಬಹುದು:
- ಪವರ್ ಟಿಲ್ಲರ್
- ಮಿನಿ ಟ್ರ್ಯಾಕ್ಟರ್
- ಮೋಟಾರ್ ಕಟ್ ಗಳು
- ಡೀಸೆಲ್ ಪಂಪ್ ಸೆಟ್
- ಪವರ್ ಸ್ಪ್ರೇಯರ್
- ಫ್ಲೋರ್ ಮಿಲ್
- ಮಿನಿ ರೈಸ್ ಮಿಲ್
ಸೇರಿದಂತೆ ಕೃಷಿ ಹಾಗೂ ಅದಕ್ಕೆ ಸಂಬಂಧಪಟ್ಟಂತಹ ಈ ರೀತಿಯ ಕೃಷಿ ಉಪಕರಣಗಳನ್ನು ನೀವು ಇಲ್ಲಿ ಖರೀದಿ ಮಾಡಬಹುದಾಗಿದೆ.
ಡಾಕ್ಯೂಮೆಂಟ್ಸ್ ಗಳು:
- ಬ್ಯಾಂಕ್ ಪಾಸ್ ಬುಕ್
- ವೋಟರ್ ಐಡಿ
- ಆಧಾರ್ ಕಾರ್ಡ್
- ಫೋಟೋ
- ಆರ್ ಟಿ ಸಿ ದಾಖಲೆ
- ನೂರು ರೂಪಾಯಿ ಮೌಲ್ಯದ ಬಾಂಡ್ ಪೇಪರ್
ನಿಮ್ಮ ಊರಿನ ಹತ್ತಿರ ಇರುವಂತಹ ರೈತ ಸಹಾಯ ಕೇಂದ್ರಗಳಿಗೆ ಹೋಗಿ ಈ ಯೋಜನೆಯಡಿಯಲ್ಲಿ ಸಬ್ಸಿಡಿ ದರದಲ್ಲಿ ಇಂತಹ ವಸ್ತುಗಳನ್ನು ಪಡೆದುಕೊಳ್ಳುವಂತಹ ಫಾರ್ಮ್ ಅನ್ನು ಪಡೆದುಕೊಂಡು ಫಿಲಪ್ ಮಾಡಿ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆಯಲ್ಲಿ ನಿಮ್ಮನ್ನು ನೀವು ನೋಂದಾವಣೆ ಮಾಡಿಕೊಳ್ಳಬಹುದಾಗಿದೆ. ರೈತರು ಈ ಯೋಜನೆಯ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ಮೂಲಕ ಕೃಷಿ ಉಪಕರಣಗಳ ಮೇಲೆ ಹಣವನ್ನು ಉಳಿಸಬಹುದಾಗಿದೆ.