ಭಾರತೀಯ ರೈಲ್ವೆ ಇಲಾಖೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿದಿನ ಇಡೀ ಭಾರತ ದೇಶದಲ್ಲಿ ಇರುವಂತಹ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ನಲ್ಲಿ ಲಕ್ಷಾಂತರ ಕೋಟ್ಯಾಂತರ ಪ್ರಯಾಣಿಕರನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ದೂರ ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಚ್ಚಾಗಿ ಪ್ರಮುಖ ಲಾಜಿಸ್ಟಿಕ್ ಸಾಧನವಾಗಿ ಕೆಲಸ ಮಾಡುತ್ತದೆ.
ನಮ್ಮ ಭಾರತ ದೇಶದಲ್ಲಿ ಅತ್ಯಂತ ಹೆಚ್ಚಾಗಿ ಜನರು ಪ್ರಯಾಣ ಮಾಡೋದು ರೈಲ್ವೆ ಪ್ರಯಾಣ ಅನ್ನೋದು ಕೂಡ ಇಲ್ಲಿ ಪ್ರಮುಖವಾಗಿ ನಾವು ಗಮನಿಸಬೇಕಾಗಿರುತ್ತದೆ.
ಇನ್ನು ಬಸ್ಸಿನಲ್ಲಿ ಪ್ರಯಾಣ ಮಾಡುವಾಗ ನಿಮಗೆಲ್ಲರಿಗೂ ತಿಳಿದಿರಬಹುದು ಇಂತಿಷ್ಟು ವರ್ಷದ ಮಕ್ಕಳಿಗೆ ಟಿಕೆಟ್ ಮಾಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಹೇಳಲಾಗುತ್ತದೆ ಅದೇ ರೀತಿಯಲ್ಲಿ ರೈಲ್ವೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಎಷ್ಟು ವರ್ಷದ ಮಕ್ಕಳಿಗೆ ಟಿಕೆಟ್ (Child Train Ticket) ಮಾಡಬೇಕು ಅಥವಾ ಮಾಡಬಾರದು ಎನ್ನುವಂತಹ ನಿಯಮಗಳ ಬಗ್ಗೆ ಸಾಕಷ್ಟು ಜನರು ತಿಳಿದುಕೊಂಡಿರುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ಇವತ್ತಿನ ಈ ಲೇಖನದ ಮೂಲಕ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
ಮಕ್ಕಳ ರೈಲ್ವೆ ಟಿಕೆಟ್ ಬಗ್ಗೆ ಇಲ್ಲಿದೆ ನೋಡಿ ನಿಯಮ:
ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಯಾವುದೇ ಕಾರಣಕ್ಕೂ ರೈಲ್ವೆ ಪ್ರಯಾಣ ಮಾಡುವ ಸಂದರ್ಭದಲ್ಲಿ ಟಿಕೆಟ್ (Child Train Ticket) ತೆಗೆದುಕೊಳ್ಳಬೇಕಾಗಿರುವಂತಹ ಅಗತ್ಯ ಇಲ್ಲ ಎನ್ನುವುದನ್ನು ರೈಲ್ವೆ ಇಲಾಖೆ ಅಧಿಕೃತವಾಗಿ ಸೂಚಿಸಿದೆ.
ಐದರಿಂದ 12 ವರ್ಷದ ವಯಸ್ಸಿನ ಮಕ್ಕಳ ಟಿಕೆಟ್ ಅನ್ನು ಖರೀದಿ ಮಾಡಿದರೆ ಮಾತ್ರ ಸಾಕು. ಇನ್ನು ಸಾಮಾನ್ಯವಾಗಿ ರೈಲ್ವೆ ಟಿಕೆಟ್ ಅನ್ನು ಮುಂಚಿತವಾಗಿ ಬುಕ್ ಮಾಡಬೇಕಾಗಿರುವುದರಿಂದಾಗಿ 4 ವರ್ಷದ ವಯಸ್ಸಿನ ಒಳಗಿನ ಮಕ್ಕಳಾಗಿದ್ದರು ಕೂಡ ಅವರ ಬಗ್ಗೆ ಮಾಹಿತಿಯನ್ನು ನೀವು ನೀಡಬೇಕಾಗಿರುವುದು.