ಈಗಾಗಲೇ ರಾಜ್ಯದಲ್ಲಿ ತಿಳಿದು ಬಂದಿರುವಂತಹ ಅಂಕಿ ಅಂಶಗಳ ಪ್ರಕಾರ 80 ಪ್ರತಿಶತ ಜನರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅಂದರೆ ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬದಿಂದ ಬಂದಿದ್ದಾರೆ ಎಂಬುದಾಗಿ ಉಲ್ಲೇಖವಾಗುತ್ತದೆ.
ನಿಜಕ್ಕೂ ಕೂಡ ಕರ್ನಾಟಕ ರಾಜ್ಯದಲ್ಲಿ ಅಂತಹ ಬಡತನದ ಸಮಸ್ಯೆ ಇಲ್ಲ ಅನ್ನೋದು ಕೂಡ ತಿಳಿದಿರುವಂತಹ ವಿಚಾರವಾಗಿದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೇಗೆ ಇಷ್ಟೊಂದು ಹೆಚ್ಚಾಗಿತ್ತು ಎನ್ನುವುದರ ಬಗ್ಗೆ ಸಿಗುವಂತಹ ಉತ್ತರ ಅಂದ್ರೆ ಅದು ಸಾಕಷ್ಟು ಜನರು ನಕಲಿ ದಾಖಲೆ ಪತ್ರಗಳನ್ನು ಒದಗಿಸುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಮಾಡಿಸಿಕೊಂಡು ಅವರಿಗೆ ಈಗ ಬಿಸಿ ಮುಟ್ಟಿಸುವಂತಹ ಕೆಲಸಕ್ಕೆ ಸರ್ಕಾರ ಮುಂದಾಗಿದೆ.
ಅಕ್ರಮ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವವರಿಗೆ ಈ ಶಿಕ್ಷೆ:
ಅನರ್ಹರಾಗಿದ್ರು ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿರುವಂತಹ ಅನುಕೂಲಸ್ಥರಿಗೆ ರಾಜ್ಯ ಸರ್ಕಾರದ ಆಹಾರ ಸಚಿವರಾಗಿರುವ ಕೆಎಚ್ ಮುನಿಯಪ್ಪ (KH Muniyappa) ಅವರು ಅಕ್ರಮವಾಗಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವಂತವರನ್ನು ನೇರವಾಗಿ ಎಪಿಎಲ್ ರೇಷನ್ ಕಾರ್ಡಿಗೆ (APL Ration Card) ಪರಿವರ್ತನೆ ಮಾಡಲಾಗುತ್ತದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ.
ರಾಜ್ಯದಲ್ಲಿ ತಿಳಿದು ಬಂದಿರುವಂತಹ ಮಾಹಿತಿಯ ಪ್ರಕಾರ ಇದುವರೆಗೆ 10.97 ಲಕ್ಷಕ್ಕೂ ಅಧಿಕ ಬಿಪಿಎಲ್ ರೇಷನ್ ಕಾರ್ಡ್ ಗಳು ಅಕ್ರಮವಾಗಿ ಬಳಕೆಯಾಗುತ್ತಿವೆ ಎನ್ನುವಂತಹ ಮಾಹಿತಿ ತಿಳಿದು ಬಂದಿದ್ದು ಹಂತ ಹಂತವಾಗಿ ಇದನ್ನ ಪತ್ತೆ ಹಚ್ಚಿ ಅನರ್ಹರಾಗಿರುವಂತಹ ಜನರ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಎಪಿಎಲ್ ರೇಷನ್ ಕಾರ್ಡಿಗೆ ಬದಲಾವಣೆ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾರಂಭ ಮಾಡಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.