ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಪ್ರತಿಯೊಂದು ಹಣಕಾಸು ಸಂಬಂಧ ಪಟ್ಟಂತಹ ನಿಯಮಗಳನ್ನ ಬದಲಾಯಿಸುವಂತಹ ಹಾಗೂ ಹೊಸದಾಗಿ ಜಾರಿಗೆ ತರುವಂತಹ ಅಧಿಕಾರವನ್ನು ಹೊಂದಿರುವ ಏಕೈಕ ಸಂಸ್ಥೆ ಆಗಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2 ಸಾವಿರ ರೂಪಾಯಿ ಮುಖಬೆಲೆಯನ್ನು ಹೊಂದಿರುವಂತಹ ನೋಟುಗಳನ್ನು ಕಳೆದ ವರ್ಷದ ಮೇ ತಿಂಗಳಿನಲ್ಲಿ ವಾಪಾಸ್ ಪಡೆದುಕೊಂಡಿತ್ತು, 97.96 ಪ್ರತಿಶತ ನೋಟುಗಳನ್ನು ಹಿಂಪಡೆದುಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯಶಸ್ವಿಯಾಗಿತ್ತು. ಆದರೆ ಜನರ ಬಳಿ ಈಗಲೂ ಕೂಡ 7,261 ಕೋಟಿ ರೂಪಾಯ್ ಮೌಲ್ಯದ 2000 ರೂಪಾಯಿ ಮುಖಬೆಲೆಯ ನೋಟುಗಳು ಇವೆ.
2000 ರೂಪಾಯಿ ನೋಟಿನ ಬಗ್ಗೆ ಆರ್ ಬಿ ಐ ತೆಗೆದುಕೊಂಡ ನಿರ್ಧಾರ ಏನು ಗೊತ್ತಾ?
ಇನ್ನು ಸಾಕಷ್ಟು ಜನರ ಬಳಿ ಇವತ್ತಿಗೂ ಕೂಡ 2000 ರೂಪಾಯಿಗಳ ನೋಟು (Rs 2000 Note) ಇದೆ. ಅದನ್ನ ಯಾವ ರೀತಿಯಲ್ಲಿ ಎಕ್ಸ್ಚೇಂಜ್ ಮಾಡಿಕೊಳ್ಳಬಹುದು ಅಥವಾ ತಮ್ಮ ಖಾತೆಗೆ ಡೆಪಾಸಿಟ್ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ಇವತ್ತಿಗೂ ಕೂಡ ಸಾಕಷ್ಟು ಗೊಂದಲದಲ್ಲಿದ್ದಾರೆ ಎಂದು ಹೇಳಬಹುದಾಗಿದೆ.
ಇದಕ್ಕೆ ಪರಿಹಾರ ನೀಡುವ ರೀತಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪೋಸ್ಟ್ ಆಫೀಸ್ ಗಳ ಮೂಲಕ ಆರ್ ಬಿ ಐ ನ ಕೆಲವೊಂದು ಬ್ರಾಂಚ್ ಗಳಿಗೆ ಹಣವನ್ನು ಟ್ರಾನ್ಸ್ಫರ್ ಮಾಡುವ ಮೂಲಕ ಖಾತೆಗೆ ಹಣವನ್ನು ಹಾಕಿಕೊಳ್ಳುವಂತಹ ಅವಕಾಶವನ್ನ ಈಗಲೂ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಕ್ತವಾಗಿರಿಸಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಈ ಶಾಖೆಗಳು ಎಲ್ಲೆಲ್ಲಿ ಇವೆ ಅನ್ನೋದನ್ನ ಕೂಡ ತಿಳಿಯೋಣ ಬನ್ನಿ.
- ಬೆಂಗಳೂರು
- ಬೇಲಾಪುರ
- ಭೋಪಾಲ್
- ನಾಗ್ಪುರ
- ನ್ಯೂ ಡೆಲ್ಲಿ
- ಪಾಟ್ನಾ
- ತಿರುವನಂತಪುರಂ
- ಲಕ್ನೋ
- ಕಾನ್ಪುರ
- ಕೊಲ್ಕತ್ತಾ
ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ನೀವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿಯನ್ನು ಕಾಣಬಹುದಾಗಿದೆ.