ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೇಷನ್ ಕಾರ್ಡ್ (Ration Card) ಅನ್ನು ಪ್ರತಿಯೊಬ್ಬ ಭಾರತೀಯರಿಗೂ ಅದರಲ್ಲಿ ವಿಶೇಷವಾಗಿ ಭಾರತೀಯ ಕುಟುಂಬಗಳಿಗೆ ವಿತರಿಸುವಂತಹ ಕೆಲಸವನ್ನು ಮಾಡಿದ್ದು ಅದರಲ್ಲಿ ಕೂಡ ಅವರ ಆರ್ಥಿಕ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳನ್ನು ವಿಂಗಡಿಸುವಂತಹ ಕೆಲಸವನ್ನು ಹಾಗೂ ಆ ವಿಂಗಡಿಸಿರುವಂತಹ ರೇಷನ್ ಕಾರ್ಡ್ ಗಳಿಗೆ ಬೇರೆ ಬೇರೆ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸುವಂತಹ ಕೆಲಸವನ್ನು ಕೂಡ ಮಾಡಿಕೊಂಡು ಬಂದಿದೆ. ಎಪಿಎಲ್, ಬಿಪಿಎಲ್ ಹಾಗೂ ಅಂತ್ಯೋದಯ ರೇಷನ್ ಕಾರ್ಡ್ (Antyodaya Ration Card) ಗಳ ಬಗ್ಗೆ ನೀವು ಕೇಳಿರುತ್ತೀರಿ.
ಇನ್ನು ಅನ್ನ ಭಾಗ್ಯ ಯೋಜನೆ (Anna Bhagya Yojana) ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಜ್ಯ ಸರ್ಕಾರ 10 ಕೆಜಿ ಅಕ್ಕಿಯಲ್ಲಿ ಐದು ಕೆಜಿ ಅಕ್ಕಿ ನೀಡಿದರೆ ಇನ್ನು ಉಳಿದ ಐದು ಕೆಜಿ ಅಕ್ಕಿಯನ್ನು ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಹಣವನ್ನು ಖಾತೆಗೆ ವರ್ಗಾವಣೆ ಮಾಡುತ್ತಿದೆ. ಆದರೆ ಈಗ ಹಣದ ಬದಲಿಗೆ ಆಹಾರ ಕಿಟ್ ನೀಡುವಂತಹ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ನಡೆಯುವಂತಹ ಸಮಾಲೋಚನೆಯ ನಂತರ ಬರುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
10 ಕೆಜಿ ಅಕ್ಕಿಯನ್ನು ಉಚಿತವಾಗಿ ಅನ್ನ ಭಾಗ್ಯ ಯೋಜನೆ (Anna Bhagya Yojana) ಅಡಿಯಲ್ಲಿ ನೀಡುವಂತಹ ವಾಗ್ದಾನವನ್ನು ರಾಜ್ಯ ಸರ್ಕಾರ ಚುನಾವಣೆಗೆ ಮುಂಚೆ ಮಾಡಿದ್ದು ಆದರೆ ಚುನಾವಣೆಯ ನಂತರ ಕೇಂದ್ರ ಸರ್ಕಾರದಿಂದ ಸರಿಯಾದ ಪ್ರಮಾಣದಲ್ಲಿ ಅಕ್ಕಿ ಪೂರೈಕೆ ಆಗುತ್ತಿಲ್ಲ ಎನ್ನುವಂತಹ ಸಬೂಬೂ ನೀಡಿ 5 ಕೆಜಿ ಅಕ್ಕಿಯನ್ನು ಹಣ ರೂಪದಲ್ಲಿ ನೇರವಾಗಿ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸ ಮಾಡಿಕೊಂಡು ಬಂದಿತ್ತು.
ಈಗ ಇದಕ್ಕೆ ಎಣ್ಣೆ, ರಾಗಿ, ಸೇರಿ 5 ಕೆ.ಜಿ ಅಕ್ಕಿಯನ್ನು ಕೂಡ ಜೊತೆಯಾಗಿ ನೀಡುವಂತಹ ನಿರ್ಧಾರವನ್ನು ಮಾಡುವಂತಹ ನಿಲುವಿಗೆ ರಾಜ್ಯ ಸರ್ಕಾರ ಬಂದಿದೆ ಎನ್ನುವಂತಹ ಮಾಹಿತಿ ದೊರಕಿದೆ. ಇದರ ಕುರಿತಂತೆ ರಾಜ್ಯ ಸರ್ಕಾರ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರದ ಬಗ್ಗೆ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.