ಇನ್ನೇನು ಗಣೇಶ ಚತುರ್ಥಿ ಹಬ್ಬ ಮುಗೀತಾ ಬಂತು. ಇನ್ನೇನಿದ್ರೂ ದೇವಿಯರ ಹಬ್ಬ ಒಂದೊಂದಾಗಿಯೇ ಪ್ರಾರಂಭ ಆಗೋದು ಖಚಿತವಾಗಿದೆ. ಹೀಗಾಗಿ ಭಾರತ ದೇಶದಲ್ಲಿ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹಬ್ಬದ ಸಂದರ್ಭದಲ್ಲಿ ಶುಭ ಸೂಚಕದ ರೀತಿಯಲ್ಲಿ ಖರೀದಿ ಮಾಡುವಂತಹ ಚಿನ್ನದ ಬೆಲೆ (Gold Rate) ಗಾಣನೀಯವಾಗಿ ಏರಿಕೆ ಆಗಬಹುದು ಎಂದು ಹೇಳಬಹುದಾಗಿದೆ.
ಆದರೆ ಸದ್ಯದ ಮಟ್ಟಿಗೆ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಅನ್ನೋದು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಹಾಗಿದ್ರೆ ಬನ್ನಿ ಇವತ್ತಿನ ದಿನಾಂಕದ ಪ್ರಕಾರ ಅಂದರೆ ಸೆಪ್ಟೆಂಬರ್ 8ನೇ ದಿನಾಂಕದ ಪ್ರಕಾರ ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಇದೆ ಅನ್ನೋದನ್ನ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.
ಸೆಪ್ಟೆಂಬರ್ 8ಕ್ಕೆ ಭಾರತದಲ್ಲಿ ಚಿನ್ನದ ಬೆಲೆ:
24 ಕ್ಯಾರೆಟ್ ಶುದ್ಧತೆಯನ್ನು ಹೊಂದಿರುವಂತಹ ಒಂದು ಗ್ರಾಂ ಚಿನ್ನದ ಬೆಲೆ (Gold Rate) 7287 ರೂಪಾಯಿ ಆಗಿದೆ ಹಾಗೂ 10 ಗ್ರಾಂ ಚಿನ್ನದ ಬೆಲೆ 72,870 ರೂಪಾಯಿ ಆಗಿದೆ. ಇದೇ ರೀತಿಯಲ್ಲಿ ಬಹುತೇಕ ಹೆಚ್ಚಿನ ಜನರು ಖರೀದಿ ಮಾಡುವಂತಹ 22 ಕ್ಯಾರೆಟ್ ಶುದ್ಧತೆಯ ಚಿನ್ನದ ಬೆಲೆ ಒಂದು ಗ್ರಾಂಗೆ 6,680 ರೂಪಾಯಿ ಆಗಿದೆ ಹಾಗೂ 10 ಗ್ರಾಂ ಗೆ 66800 ರೂಪಾಯಿ ಆಗಿದೆ.
ಈ ಮೇಲೆ ಹೇಳಿರುವಂತಹ ಚಿನ್ನದ ಬೆಲೆ ಪ್ರಮುಖವಾಗಿ ನಮ್ಮ ರಾಜ್ಯದ ರಾಜಧಾನಿ ಆಗಿರುವಂತಹ ಬೆಂಗಳೂರಿನ ಚಿನ್ನದ ಬೆಲೆಯಾಗಿದೆ. ದೇಶದಲ್ಲಿರುವಂತಹ ಪ್ರಮುಖ ಎಲ್ಲಾ ನಗರಗಳಿಂದ ನೀವು ಚಿನ್ನದ ಬೆಲೆಯ ಮಾಹಿತಿನ ತಿಳಿದುಕೊಂಡರೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶದ ಚಿನ್ನದ ಬೆಲೆಗೆ ಸಾಕಷ್ಟು ಅಂತರ ಇರುತ್ತದೆ. ಇದಕ್ಕೆ ಪ್ರಮುಖ ಕಾರಣ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವಂತಹ ಚಿನ್ನದ ಲಾಜಿಸ್ಟಿಕ್ ಖರ್ಚಿನ ಬೆಲೆ ಕೂಡ ಒಳಗೊಂಡಿರುತ್ತದೆ. ಹೀಗಾಗಿ ನೀವು ಭಾರತ ದೇಶದ ಬೇರೆ ಬೇರೆ ನಗರಗಳಲ್ಲಿ ಚಿನ್ನದ ಬೆಲೆಯನ್ನು ಬೇರೆ ಬೇರೆಯಾಗಿ ಕಾಣಲು ಸಾಧ್ಯವಿದೆ.