ಭಾರತ ದೇಶದಲ್ಲಿ ಚಿನ್ನ (Gold) ಹಾಗೂ ಬೆಳ್ಳಿಯ (Silver) ಬೆಲೆ ಅನ್ನೋದು ದಿನ ಬೆಳಗಾದರೆ ಏರುಪೇರು ಆಗುವುದು ಗ್ಯಾರಂಟಿ ಇದಕ್ಕೆ ಪ್ರಮುಖವಾದ ಕಾರಣ ಆಗೋದು ಜಾಗತಿಕ ಮಟ್ಟದಲ್ಲಿ ಇದರ ಬೆಲೆಯಲ್ಲಿ ಕಂಡುಬರುವಂತಹ ಬದಲಾವಣೆಗಳು.
ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಇವತ್ತಿನ ದಿನದಲ್ಲಿ ಅಂದ್ರೆ ಸೆಪ್ಟೆಂಬರ್ 6ನೇ ದಿನಾಂಕದಂದು ಚಿನ್ನದ ಬೆಲೆ (Gold Rate) ಹಾಗೂ ಬೆಳ್ಳಿಯ ಬೆಲೆ (Silver Rate) ಭಾರತದ ದೇಶಿಯ ಮಾರುಕಟ್ಟೆಯಲ್ಲಿ ಯಾವ ರೀತಿಯಲ್ಲಿ ಇದೆ ಎನ್ನುವುದನ್ನು.
ಇವತ್ತಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ:
ಸದ್ಯದ ಮಟ್ಟಿಗೆ ಟ್ರೆಂಡ್ ಭಾರತ ದೇಶದಲ್ಲಿ ಸೂಚಿಸುತ್ತಿರುವಂತಹ ಮಾಹಿತಿಯ ಪ್ರಕಾರ ಚಿನ್ನದ ಬೆಲೆ (Gold Rate) ಯಲ್ಲಿ ಸ್ವಲ್ಪಮಟ್ಟಿಗೆ ಇಳಿಕೆ ಕಂಡುಬರುತ್ತಿದೆ ಎನ್ನುವಂತಹ ಮಾಹಿತಿ ಇದೆ. ಅದೇ ರೀತಿಯಲ್ಲಿ ಈಗ 22 ಕ್ಯಾರೆಟ್ ಬಂಗಾರದ ಬೆಲೆ ಒಂದು ಗ್ರಾಂಗೆ 6,720 ಹಾಗೂ 10 ಗ್ರಾಂ ಗೆ 67,200 ರೂಪಾಯಿ ಆಗಿದೆ ಎನ್ನುವ ಮಾಹಿತಿ ಇದೆ. 24 ಕ್ಯಾರೆಟ್ ಒಂದು ಗ್ರಾಂ ತೂಕದ ಚಿನ್ನದ ಬೆಲೆ 7,331 ರೂಪಾಯಿ ಹಾಗೂ 10 ಗ್ರಾಂ ಚಿನ್ನದ ಬೆಲೆ 73,310 ರೂಪಾಯಿ ಆಗಿರುತ್ತದೆ.
ಇನ್ನು ಬೆಳ್ಳಿಯ ವಿಚಾರಕ್ಕೆ ಬಂದರೆ ಒಂದು ಕೆಜಿ ಬೆಳ್ಳಿಯ ಬೆಲೆ 83000 ರೂಪಾಯಿ ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಒಂದೊಂದಾಗಿ ಹಬ್ಬ ಹೆಚ್ಚಾಗಿ ಪ್ರಾರಂಭವಾಗುತ್ತದೆ ಹಾಗೂ ಹಿಂದೂ ಸಂಸ್ಕೃತಿಯ ಜನರು ಹಬ್ಬದ ದಿನಗಳಲ್ಲಿ ಚಿನ್ನವನ್ನ ಖರೀದಿಸುವುದು ಅತ್ಯಂತ ಶುಭ ಎಂಬುದಾಗಿ ಪರಿಗಣಿಸುತ್ತದೆ ಹೀಗಾಗಿ ಚಿನ್ನದ ಬೇಡಿಕೆ ಮಾರುಕಟ್ಟೆಯಲ್ಲಿ ಹೆಚ್ಚಾದಂತೆ ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಕೂಡ ಗಣನೀಯವಾಗಿ ಹೆಚ್ಚಾಗುವಂತಹ ನಿರೀಕ್ಷೆ ಇದೆ ಹೀಗಾಗಿ ಈಗಲೇ ಚಿನ್ನ ಖರೀದಿ ಮಾಡುವುದು ಬುದ್ಧಿವಂತ ನಿರ್ಧಾರ ಎಂದು ಹೇಳಬಹುದಾಗಿದೆ.