ರಾಜ್ಯದಲ್ಲಿ ಈಗಾಗಲೇ ಅಂಕಿ ಅಂಶಗಳಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಒಟ್ಟಾರೆ ಜನಸಂಖ್ಯೆಯ 80% ಜನರು ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಹೊಂದಿದ್ದಾರೆ. ಖಂಡಿತವಾಗಿ ಅಷ್ಟೊಂದು ಜನರು ನಮ್ಮ ರಾಜ್ಯದಲ್ಲಿ ಬಡವರಾಗಿಲ್ಲ ಅನ್ನೋದು ಎಲ್ಲರಿಗೂ ತಿಳಿದಿರುವಂತಹ ವಿಚಾರ, ಹೀಗಾಗಿ ಈ ಮೂಲಕ ತಿಳಿದು ಬರುವಂತಹ ಒಂದು ಪ್ರಮುಖ ಮಾಹಿತಿ ಏನಂದರೆ ಬಹುತೇಕ ಎಲ್ಲರೂ ಕೂಡ ನಕಲಿ ದಾಖಲೆ ಪತ್ರಗಳನ್ನು ನೀಡುವ ಮೂಲಕ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬುದಾಗಿ ಈ ವಿಚಾರದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗಳು ನಡೆದಿದಿವೆ.
ಈ ವಿಚಾರದ ಬಗ್ಗೆ ಸಚಿವರಾಗಿರುವಂತಹ ಕೆಎಚ್ ಮುನಿಯಪ್ಪ (K. H. Muniyappa) ಕೂಡ ಅಧಿಕೃತವಾಗಿ ಈ ರೀತಿ ಅನರ್ಹರಾಗಿದ್ರು ಕೂಡ ಬಡವರಿಗೆ ಸೇರಿ ಬೇಕಾಗಿರುವಂತಹ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಹೊಂದಿರುವಂತಹ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಬಡತನದ ರೇಖೆಗಿಂತ ಕೆಳಗಿರುವಂತಹ ಕುಟುಂಬಗಳನ್ನು ಹೊರತುಪಡಿಸಿ ಬೇರೆ ಯಾರೇ ಆಗಿರಲಿ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ರೆ ಅವರ ವಿರುದ್ಧ ಯಾವುದೇ ಅನುಮಾನವಿಲ್ಲದೆ ಕಾನೂನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವುದು ಶತಸಿದ್ಧ ಎಂಬ ಮಾತನ್ನು ಕೂಡ ಈ ಸಂದರ್ಭದಲ್ಲಿ ಅವರು ಹೇಳಿಕೊಂಡಿದ್ದಾರೆ.
ಇದೇ ಕಾರಣಕ್ಕಾಗಿ ಈ ರೀತಿ ಅರ್ಹತೆ ಇಲ್ಲದೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ (BPL Ration Card) ಅನ್ನು ಒಂದು ವೇಳೆ ನೀವು ಹೊಂದಿದ್ದರೆ ಆದಷ್ಟು ವೇಗವಾಗಿ ಅದನ್ನ ಸರೆಂಡರ್ ಮಾಡುವುದು ಒಳ್ಳೆಯದು ಇಲ್ಲವಾದಲ್ಲಿ ಸರ್ಕಾರದಿಂದ ಕಠಿಣ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಇದರ ಜೊತೆಗೆ ಬಿಪಿಎಲ್ ರೇಷನ್ ಕಾರ್ಡ್ ದಾರರಿಗೆ ನೀಡುತ್ತಿರುವಂತಹ ಅಕ್ಕಿಯ ಜೊತೆಗೆ ಬೇಳೆಕಾಳುಗಳನ್ನು ಕೂಡ ನೀಡಬೇಕು ಎನ್ನುವಂತಹ ಬೇಡಿಕೆ ಸಚಿವರ ಮುಂದೆ ಇದೇ ಸಂದರ್ಭದಲ್ಲಿ ಬಂದಿದೆ ಎಂಬುದಾಗಿ ಕೂಡ ತಿಳಿದು ಬಂದಿದೆ.