ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅನ್ನು ಅಳವಡಿಸುವಂತಹ ಕೊನೆಯ ದಿನಾಂಕ ಸೆಪ್ಟೆಂಬರ್ 15 ಆಗಿದೆ. ಸಾಕಷ್ಟು ದಿನಾಂಕಗಳನ್ನು ಮುಂದೂಡಿದ ನಂತರ ಕೊನೆಗೂ ಸರ್ಕಾರ ಸೆಪ್ಟೆಂಬರ್ 15 ಕೊನೆಯ ದಿನಾಂಕ ಎಂಬುದಾಗಿ ಪರಿಗಣಿಸಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ವಾಹನ ಹಾಗೂ ಟ್ರಾಫಿಕ್ ನಿಯಮಗಳಲ್ಲಿ (Traffic Rules) ಸಾಕಷ್ಟು ಬದಲಾವಣೆಗಳನ್ನು ಹಾಗೂ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ ಅನ್ನೋದನ್ನ ನೀವು ಈಗಾಗಲೇ ತಿಳಿದುಕೊಂಡಿದ್ದೀರಿ.
ಇನ್ನು ಸಾಮಾನ್ಯವಾಗಿ ತಮ್ಮ ವಾಹನಗಳಲ್ಲಿ ಪ್ರತಿಯೊಬ್ಬರೂ ಕೂಡ ಸ್ಟಿಕರ್ (Sticker) ಹಾಕಿಸಿಕೊಳ್ಳುವುದು ಸರ್ವೆ ಸಾಮಾನ್ಯ ಆಗಿರುತ್ತೆ ಆದರೆ, ಇನ್ಮುಂದೆ ಈ ಆಟಗಳು ನಡೆಯೋದಿಲ್ಲ ಯಾಕೆಂದರೆ RTO ಈ ವಿಚಾರದಲ್ಲಿ ಕೂಡ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಗಾಡಿಗೆ ಸ್ಟಿಕರ್ ಹಾಕೋ ಹಾಗಿಲ್ಲ!
RTO ನ ಹೊಸ ನಿಯಮಗಳ (RTO New Rules) ಪ್ರಕಾರ ಇನ್ಮುಂದೆ ನಿಮ್ಮ ವಾಹನಗಳಿಗೆ ಸ್ಟಿಕ್ಕರ್ ಹಾಕುವ ಹಾಗೆ ಇರೋದಿಲ್ಲ. ಈ ಹಿಂದೆ ತಮ್ಮ ವಾಹನಗಳಿಗೆ ತಮ್ಮ ಜಾತಿ, ಧರ್ಮ, ನೆಚ್ಚಿನ ನಟರು, ರಾಜಕಾರಣಿಗಳು ಹಾಗೂ ದೇವರ ಫೋಟೋ ಅಥವಾ ಹೆಸರಿನ ಸ್ಟಿಕರ್ ಹಾಕಿಸುವುದು ಸರ್ವೇಸಾಮಾನ್ಯವಾಗಿತ್ತು.
ಇತ್ತೀಚಿನ ದಿನಗಳಲ್ಲಿ ರೇಣುಕಾ ಸ್ವಾಮಿ (Renukaswamy) ಅವರ ಪ್ರಕರಣದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜೈಲಿನಲ್ಲಿ ಇರುವಂತಹ ದರ್ಶನ್ (Darshan) ರವರ ಯೂನಿಫಾರ್ಮ್ ನಂಬರ್ ವಿಚಾರದಲ್ಲಿ ಕೂಡ ಅವರ ಅಭಿಮಾನಿಗಳು ತಮ್ಮ ವಾಹನದ ಮೇಲೆ ಸ್ಟಿಕರ್ (Sticker) ಹಾಕಿಕೊಂಡಿರುವುದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಸಾರಿಗೆ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರು ಅಧಿಕೃತವಾಗಿ ಮಾಡಿರುವಂತಹ ಘೋಷಣೆಯ ಪ್ರಕಾರ ಈ ರೀತಿಯ ಸ್ಟಿಕರ್ಗಳನ್ನು ವಾಹನಗಳ ಮೇಲೆ ಅಂಟಿಸುವುದನ್ನು ನಿಷೇಧಿಸಲಾಗಿದ್ದು ಮೊದಲ ಕೆಲವು ಬಾರಿ ಕೇವಲ ವಾರ್ನಿಂಗ್ ನೀಡುತ್ತವೆ ಹಾಗೂ ಅದಾದ ಮೇಲೆ ಕೂಡ ಸ್ಟಿಕರ್ ತೆಗೆಯದೆ ಹೋದಲ್ಲಿ ವಾಹನ ಸವಾರದ ಮೇಲೆ ದಂಡವನ್ನು ವಿಧಿಸಲಾಗುತ್ತದೆ ಹಾಗೂ ಹೆಚ್ಚುವರಿ ಕ್ರಮವನ್ನು ಜರುಗಿಸುವಂತಹ ಸಾಧ್ಯತೆ ಕೂಡ ಇದೆ ಎಂಬಂತಹ ಕಟ್ಟೆಚ್ಚರಿಕೆಯನ್ನು ನೀಡಿದ್ದಾರೆ.