ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರ ಹಾಗೂ ವಾಹನ ಇಲಾಖೆಯ ಸಚಿವಾಲಯ ಸೆಪ್ಟೆಂಬರ್ 15ಕ್ಕೆ ಪ್ರತಿಯೊಬ್ಬರು ಕೂಡ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ (HSRP Number Plate) ಅಳವಡಿಸಿಕೊಳ್ಳಲೇಬೇಕು ಎನ್ನುವಂತಹ ಕೊನೆಯ ದಿನಾಂಕವನ್ನು ಘೋಷಣೆ ಮಾಡಿತ್ತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈಗ ಆ ಕೊನೆಯ ದಿನಾಂಕ ಹತ್ತಿರ ಸಮೀಪಿಸುತ್ತಿದೆ. ಇನ್ನು ಆ ಸಂದರ್ಭದಲ್ಲಿಯೇ ಒಂದು ವೇಳೆ ನಿಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಹೋದಲ್ಲಿ ಮೊದಲ ಬಾರಿಗೆ ಸಿಕ್ಕಿಬಿದ್ದರೆ ದಂಡವನ್ನು ವಿಧಿಸಲಾಗುತ್ತದೆ ಹಾಗೂ ಮುಂದುವರೆಯುತ್ತಾ ಹೋದಂತೆ ಗಾಡಿಯನ್ನು ಸೀಸ್ ಮಾಡಬೇಕಾದಂತಹ ಸ್ಥಿತಿ ಕೂಡ ಬರಬಹುದಾಗಿದೆ ಎನ್ನುವ ಎಚ್ಚರಿಕೆಯನ್ನು ಮೊದಲೇ ನೀಡಿದ್ದಾರೆ.
HSRP ನಂಬರ್ ಪ್ಲೇಟ್ ಹಾಕಿಸಿಕೊಳ್ಳದೆ ಇರೋರು ಇದನ್ನು ಪ್ರಮುಖವಾಗಿ ಗಮನಿಸಿ:
HSRP ನಂಬರ್ ಪ್ಲೇಟ್ ಅನ್ನು ಸೆಪ್ಟೆಂಬರ್ 15 ರ ಒಳಗೆ ನಿಮ್ಮ ವಾಹನಗಳಿಗೆ ಅಳವಡಿಸಿಕೊಳ್ಳಲೇಬೇಕು ಅನ್ನೋದು ಕಟ್ಟುನಿಟ್ಟಿನ ನಿಯಮವಾಗಿದ್ದು ಕೇವಲ 10 ದಿನಗಳು ಮಾತ್ರ ಬಾಕಿ ಉಳಿದುಕೊಂಡಿದೆ, ಪ್ರಮುಖವಾಗಿ ಮೊದಲನೇ ಬಾರಿ ಹಾಗೂ ಎರಡನೇ ಬಾರಿ ಸಿಕ್ಕಿಬಿದ್ದಾಗ ಐನೂರು ಹಾಗೂ ಸಾವಿರ ರೂಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ, ಆದರೆ ಮೂರನೇ ಬಾರಿಗೆ ಸಿಕ್ಕಿಬಿದ್ದಾಗಲೂ ಕೂಡ ನೀವು ನಿಮ್ಮ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳದೆ ಹೋದಲ್ಲಿ ಆಗ ಮಾತ್ರ ನಿಮ್ಮ ವಾಹನವನ್ನು ಜಫ್ತು ಮಾಡುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೂ ಇದನ್ನು ನೀವು ಗಂಭೀರವಾಗಿ ಪರಿಗಣಿಸಬೇಕಾಗಿದೆ.
ಕರ್ನಾಟಕದಲ್ಲಿ ಇರುವಂತಹ ಎರಡು ಕೋಟಿ ವಾಹನಗಳಲ್ಲಿ HSRP ನಂಬರ್ ಪ್ಲೇಟ್ ರಿಜಿಸ್ಟ್ರೇಷನ್ (HSRP Number Plate Registration) ಅಡಿಯಲ್ಲಿ ನೋಂದಣಿ ಮಾಡಿಕೊಂಡಿರುವಂತಹ ವಾಹನಗಳ ಸಂಖ್ಯೆ 51 ಲಕ್ಷ ವಾಹನಗಳ ಆಸುಪಾಸಿನಲ್ಲಿದೆ.
2019 ಏಪ್ರಿಲ್ 1ನೇ ದಿನಾಂಕದ ಒಳಗೆ ವಾಹನವನ್ನು ಖರೀದಿ ಮಾಡಿರುವಂತಹ ಪ್ರತಿಯೊಬ್ಬರೂ ಕೂಡ ಈ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಅನ್ನು ತಮ್ಮ ವಾಹನಗಳಿಗೆ ಅಳವಡಿಸುವುದು ಕಡ್ಡಾಯವಾಗಿರುತ್ತದೆ. ಈಗಾಗಲೇ ಸಾಕಷ್ಟು ಬಾರಿ ದಿನಾಂಕದ ಮುಂದೂಡುವಿಕೆಯನ್ನು ಸರ್ಕಾರ ಮಾಡಿರುತ್ತದೆ ಹಾಗೂ ಈ ಬಾರಿ ಸೆಪ್ಟೆಂಬರ್ 15 ಕೊನೆಯ ದಿನಾಂಕ ಎನ್ನುವುದು ಸ್ಪಷ್ಟವಾಗಿದೆ. ಇನ್ನು ಕೂಡ ನೀವು ನಿರ್ಲಕ್ಷ್ಯ ಮಾಡ್ತಾ ಇದ್ರೆ ಫೈನ್ ಕಟ್ಟೋದಕ್ಕೆ ಅಥವಾ ವಾಹನವನ್ನು ಸೀಜ್ ಮಾಡಿಕೊಳ್ಳುವುದಕ್ಕೆ ಸಿದ್ಧರಾಗಬೇಕಾಗಿದೆ.