ಹಣ ಎಷ್ಟು ಉಳಿತಾಯ ಮಾಡಿದರು ಕೂಡ ಅದನ್ನು ಸರಿಯಾದ ಕಡೆಯಲ್ಲಿ ಹೂಡಿಕೆ ಮಾಡದೆ ಹೋದರೆ ಆ ಹಣದ ವ್ಯಾಲ್ಯೂ ಇದ್ದಲ್ಲೇ ಇರುತ್ತದೆ ಹೆಚ್ಚಾಗುವುದಿಲ್ಲ, ಇನ್ನು ಹಣದ ಮೌಲ್ಯ ಹೆಚ್ಚಾಗ್ಬೇಕು ಅಂತ ಅಂದ್ರೆ ಎರಡು ಕಡೆ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣದ ವ್ಯಾಲ್ಯೂ ಹೆಚ್ಚಾಗುತ್ತೆ, ಒಂದು ಚಿನ್ನದ (Gold) ಮೇಲೆ ನೀವು ಮಾಡುವಂತಹ ಹಣದ ಹೂಡಿಕೆ ಹಾಗೂ ಇನ್ನೊಂದು ಭೂಮಿಯ (Land) ಮೇಲೆ ಮಾಡುವಂತಹ ಹಣದ ಹೂಡಿಕೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಭೂಮಿಯ ಖರೀದಿಯ ಬಗ್ಗೆ.
ಭೂಮಿಯನ್ನು ನೀವು ಖರೀದಿ ಮಾಡುವುದಕ್ಕಿಂತ ಮುಂಚೆ ಕೆಲವೊಂದು ದಾಖಲೆ ಪತ್ರಗಳನ್ನು ಪ್ರಮುಖವಾಗಿ ನೀವು ಗಮನಿಸಬೇಕಾಗುತ್ತದೆ. ಅದನ್ನು ವೇರಿಫೈ ಮಾಡಿದ ನಂತರವಷ್ಟೇ ನೀವು ಭೂಮಿಯನ್ನು ಖರೀದಿ ಮಾಡುವ ಕೆಲಸವನ್ನು ಮಾಡಿ ಇಲ್ಲವಾದರೆ ಮುಂದೆ ಮೋಸ ಹೋಗಬಹುದಾಗಿದೆ.
ಈ ಡಾಕ್ಯುಮೆಂಟ್ಸ್ಗಳನ್ನು ನೀವು ಪ್ರಮುಖವಾಗಿ ಪರಿಶೀಲಿಸಿ:
- ಭೂಮಿಯನ್ನು ಖರೀದಿಸುವ ಸಂದರ್ಭದಲ್ಲಿ ನೀವು ಯಾರಿಂದ ಖರೀದಿಸುತ್ತಿದ್ದೀರೋ ಅವರ ಹೆಸರಿನಲ್ಲಿಯೇ ಮಾಲೀಕತ್ವ ಇದೆ ಎನ್ನುವಂತಹ ಮದರ್ ಡೀಡ್ (Mother Deed) ಅವರ ಹೆಸರಿನಲ್ಲಿದೆ ಅನ್ನೋದನ್ನು ಖಚಿತಪಡಿಸಿಕೊಳ್ಳಿ.
- ಹಳೆಯ ನೋಂದಾವಣಿ ಪತ್ರ (Old Registration Certificate) ವನ್ನು ನೋಡುವ ಮೂಲಕ ಯಾರಿಂದ ನೀವು ಭೂಮಿಯನ್ನು ಖರೀದಿ ಮಾಡುತ್ತಿದ್ದೀರಿ ಎಂಬುದು ತಿಳಿದು ಬರುತ್ತದೆ.
- ನಿರಪೇಕ್ಷಣ ಪತ್ರ (Letter of Intent) ವನ್ನು ನೋಡುವ ಮೂಲಕ ಈ ಭೂಮಿಯನ್ನು ಖರೀದಿ ಮಾಡುವುದಕ್ಕೆ ಯಾರಿಂದ ಆಕ್ಷೇಪಣೆ ಇಲ್ಲ ಎನ್ನುವುದು ಸಾಬೀತಾಗುತ್ತದೆ ಹಾಗೂ ಇದರ ಜೊತೆಗೆ ಏನ್ಕಂಬರೆನ್ಸ್ ಸರ್ಟಿಫಿಕೇಟ್ (Encumbrance Certificate) ಅನ್ನು ಕೂಡ ಪಡೆದುಕೊಳ್ಳುವುದು ಅಗತ್ಯವಾಗಿದೆ.
- ಖರೀದಿ ಮಾಡುತ್ತಿರುವ ಭೂಮಿಯ ಮಾಲೀಕರ ಪ್ರಮಾಣ ಪತ್ರ ಬೇಕಾಗುತ್ತದೆ. ಇದಕ್ಕಾಗಿ ಕರೆಂಟ್ ಬಿಲ್ (Electricity Bill), ಡ್ರೈವಿಂಗ್ ಲೈಸೆನ್ಸ್ (Driving License) ಅಥವಾ ಅಡ್ರೆಸ್ ಪ್ರೂಫ್ (Address Proof) ಗಳಂತಹ ಡಾಕ್ಯುಮೆಂಟ್ಸ್ಗಳು ಕೂಡ ಸಾಕಾಗತ್ತೆ.
- ಆಸ್ತಿಯ ಮೇಲೆ ಪಾವತಿ ಮಾಡಿರುವಂತಹ ತೆರಿಗೆ ಪತ್ರ ಕೂಡ ಪ್ರಮುಖವಾಗಿ ಬೇಕಾಗಿರುತ್ತದೆ.
ಇದೇ ಕಾರಣಕ್ಕಾಗಿ ಈ ರೀತಿಯ ವ್ಯವಹಾರಗಳ ನಡೆಯುವಾಗ ವಕೀಲರು ಪ್ರಮುಖವಾಗಿ ಬೇಕಾಗಿರುತ್ತಾರೆ.