ಪ್ರತಿಯೊಬ್ಬರೂ ಕೂಡ ತಾವು ಗಳಿಕೆ ಮಾಡಿರುವಂತಹ ಹಣ ತಮ್ಮ ಕಷ್ಟಕಾಲದಲ್ಲಿ ತಮ್ಮ ಸಹಾಯಕ್ಕೆ ಬರುವ ರೀತಿಯಲ್ಲಿ ಬೆಳೆಯಬೇಕು ಎಂಬುದಾಗಿ ಭಾವಿಸುತ್ತಾರೆ ಹಾಗೂ ಆ ವಿಚಾರದ ಅಡಿಯಲ್ಲಿ ಅವರು ನೇರವಾಗಿ ಹಣವನ್ನು ಹೂಡಿಕೆ ಮಾಡುವುದಕ್ಕೆ ಹೋಗೋದು ಹೆಚ್ಚಾಗಿ ಚಿನ್ನದ ಮೇಲೆ ಎಂದು ಹೇಳಬಹುದಾಗಿದೆ.
ಚಿನ್ನವನ್ನು ಇಂದು ಖರೀದಿ ಮಾಡಿದ್ರೆ ನಾಳೆಯ ದಿನ ಅದರ ಬೆಲೆ ಏರಿಕೆಯಾದಾಗ ಆಪತ್ತಿನ ಕಾಲದಲ್ಲಿ ಅದನ್ನ ತಮ್ಮ ಆರ್ಥಿಕ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಬಳಸಿಕೊಳ್ಳಬಹುದಾಗಿದೆ ಎನ್ನುವುದೇ ಪ್ರತಿಯೊಬ್ಬ ಮಿಡಲ್ ಕ್ಲಾಸ್ ಫ್ಯಾಮಿಲಿಯ ಐಡಿಯಾ ಆಗಿರುತ್ತದೆ.
ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ (Gold Rate) ಯಾವ ರೀತಿಯಲ್ಲಿ ಬೆಲೆ ಇಳಿಕೆಯನ್ನು ಕಾಣುತ್ತಿದೆ ಎನ್ನುವುದರ ಬಗ್ಗೆ.
ಮಾರುಕಟ್ಟೆಯಲ್ಲಿ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಚಿನ್ನದ ಬೆಲೆಯಲ್ಲಿ 450ರೂ ಬೆಲೆ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್ ಚಿನ್ನದ ಬೆಲೆ (Gold Rate) 10 ಗ್ರಾಂ ಗೆ 73600 ರೂಪಾಯಿಗಳ ಬೆಲೆಯಲ್ಲಿ ಮಾರಾಟ ಆಗುತ್ತಿದೆ. ಈ ಕಡೆ ಬೆಳ್ಳಿಯ ದರದ ಬಗ್ಗೆ ಮಾತನಾಡುವುದಾದರೆ ಒಂದು ಕೆಜಿ ಬೆಳ್ಳಿಗೆ 1,650 ರೂಪಾಯಿಗಳ ಬೆಲೆ ಇಳಿಸಿಕೊಂಡು ಬಂದಿದ್ದು 1 ಕೆ.ಜಿ ಬೆಳ್ಳಿಗೆ ಒಟ್ಟಾರೆ ಬೆಲೆ 83,600 ಆಗಿದೆ ಎನ್ನುವುದಾಗಿ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಲೆ ಇಳಿಕೆಗೆ ನಿಜವಾದ ಕಾರಣ ಏನು?
ವಿದೇಶಗಳಲ್ಲಿ ಚಿನ್ನದ ಬೇಡಿಕೆ ಕಡಿಮೆ ಆಗಿರುವುದು ಹಾಗೂ ನಮ್ಮ ಭಾರತದ ಮಾರುಕಟ್ಟೆಯಲ್ಲಿ ಕೂಡ ಮಾರಾಟಗಾರರು ಹಾಗು ತಯಾರಕರಿಗೆ ಚಿನ್ನದ (Gold) ಬೇಡಿಕೆ ಕಡಿಮೆ ಆಗಿರುವಂತಹ ಹಿನ್ನೆಲೆಯಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಷ್ಟೊಂದು ಕಡಿಮೆ ಆಗ್ತಿರುವುದಕ್ಕೆ ಪ್ರಮುಖ ಕಾರಣವಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಹಬ್ಬ ಹರಿದಿನಗಳು ಹೆಚ್ಚಾಗಿ ಕಂಡುಬರುವುದರಿಂದಾಗಿ ಚಿನ್ನದ ಬೆಲೆ ಮತ್ತೆ ಏರಿದರೆ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ.