ಒಂದು ವೇಳೆ ನೀವು ಸುರಕ್ಷಿತ ಹಾಗೂ ಸುಲಭ ಮತ್ತು ಲಾಭದಾಯಕ ಹೂಡಿಕೆಗಾಗಿ ರಿಸರ್ಚ್ ಮಾಡ್ತಾ ಇದ್ರೆ ಇನ್ಮುಂದೆ ನೀವು ಅದನ್ನು ಮಾಡಬೇಕಾದ ಅಗತ್ಯ ಇಲ್ಲ. ಯಾಕೆಂದ್ರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಫಿಕ್ಸೆಡ್ ಡಿಪಾಸಿಟ್ಗಿಂತಲೂ ಲಾಭದಾಯಕವಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಪರಿಚಯಿಸಿರುವಂತಹ ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ ಗಳ (Floating Rate Savings Bonds) ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಆರ್ ಬಿ ಐ ಫ್ಲೋಟಿಂಗ್ ರೇಟ್ ಸೇವಿಂಗ್ ಬಾಂಡ್ಸ್:
ಈ (RBI Floating Rate Savings Bonds Benefits) ಯೋಜನೆಯಲ್ಲಿ ನಿಮ್ಮ ಹಣ ಸರ್ಕಾರದ ಗ್ಯಾರಂಟಿಗಳ ಜೊತೆಗೆ ಸುರಕ್ಷಿತವಾಗಿರಲಿದೆ ಹಾಗೂ ಹಣವನ್ನು ಏಳು ವರ್ಷಗಳ ಲಾಕ್ ಇನ್ ಪಿರಿಯಡ್ ವರೆಗೆ ನೀವು ಇರಿಸಬಹುದಾಗಿದೆ. ಒಂದು ಸಾವಿರ ರೂಪಾಯಿಗಳ ಮಿನಿಮಮ್ ಹೂಡಿಕೆಯಿಂದ ಪ್ರಾರಂಭಿಸಿ ಮ್ಯಾಕ್ಸಿಮಮ್ ಯಾವುದೇ ಲಿಮಿಟ್ ಇಲ್ಲದೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಇದರ ಮೇಲೆ ಸಿಗುವಂತಹ ಬಡ್ಡಿ ದರವನ್ನ ಜನವರಿ ಒಂದು ಹಾಗೂ ಜುಲೈ 1ನೇ ತಾರೀಖಿನಂದು ನೀಡಲಾಗುತ್ತದೆ.
ಏಳು ವರ್ಷಗಳವರೆಗೆ ಇದನ್ನ ಪಡೆದುಕೊಳ್ಳಲು ಸಾಧ್ಯವಿಲ್ಲ ಹೀಗಾಗಿ ಹೂಡಿಕೆ ಮಾಡುವ ಮುಂಚೆ ಯೋಚನೆ ಮಾಡಿ ಹೂಡಿಕೆ ಮಾಡಿ. ಬ್ಯಾಂಕಿನ ಫಿಕ್ಸೆಡ್ ಡೆಪಾಸಿಟ್ (Fixed Deposit) ಕಿಂತ ಹೆಚ್ಚಿನ ರಿಟರ್ನ್ ಪಡೆದುಕೊಳ್ಳಬಹುದಾಗಿದೆ.
ಪ್ರತಿ ಆರು ತಿಂಗಳಿಗೆ ಇದರ ಬಡ್ಡಿದರದ ಪೇಮೆಂಟ್ ಆಗುತ್ತದೆ. ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ನಲ್ಲಿ (Post Office) ಹೋಗಿ ಸಂಬಂಧಪಟ್ಟಂತಹ ಡಾಕ್ಯುಮೆಂಟ್ಸ್ ಮತ್ತು ಅರ್ಜಿ ಪತ್ರವನ್ನು ತುಂಬಿಸಿ ನೀಡಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಇದರಲ್ಲಿ ತೊಡಗಿಸಿಕೊಳ್ಳಬಹುದಾಗಿದೆ. ವಿದೇಶದಲ್ಲಿರುವಂತಹ ಭಾರತೀಯರು ಹಾಗೂ ವಿದೇಶಿಗರು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಹಾಗಿಲ್ಲ.