ಫಿಕ್ಸೆಡ್ ಡಿಪೋಸಿಟ್ (Fixed Deposit) ಹೂಡಿಕೆಯ ವಿಚಾರಕ್ಕೆ ಬಂದರೆ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಆಯ್ಕೆಯಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಡೆಪಾಸಿಟ್ ವಿಚಾರ ಬಂದಾಗ ಯಾವ ಬ್ಯಾಂಕುಗಳು ಹೆಚ್ಚಿನ ಬಡ್ಡಿದರವನ್ನ ನೀಡುತ್ತವೆ ಎನ್ನುವುದರ ಬಗ್ಗೆ.
ಯಾಕೆಂದರೆ ಪ್ರತಿಯೊಬ್ಬ ಹೂಡಿಕೆದಾರರನ್ನು ಕೂಡ ತನ್ನ ಲಾಭದ ಬಗ್ಗೆ ಯೋಚನೆ ಮಾಡುತ್ತಾನೆ. ಹಾಗೂ ಇಂತಹ ಹೂಡಿಕೆಗಳಲ್ಲಿ ಹೆಚ್ಚಿನ ಬಡ್ಡಿ ದರವನ್ನು ನೀಡುವಂತಹ ಬ್ಯಾಂಕುಗಳೇ ನಿಮಗೆ ಲಾಭವನ್ನು ಒದಗಿಸಿಕೊಡುತ್ತವೆ. ಅಂತಹ ಕೆಲವೊಂದು ಟಾಪ್ ಬ್ಯಾಂಕುಗಳ (Top 7 Banks) ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ.
State Bank of India:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 444 ದಿನಗಳವರೆಗಿನ ಹೂಡಿಕೆಯ (Investment) ಮೇಲೆ 7.25%, ಒಂದು ವರ್ಷಗಳವರೆಗಿನ ಹೂಡಿಕೆಯ ಮೇಲೆ 6.80 ಪ್ರತಿಶತ, ಮೂರು ವರ್ಷಗಳ ವರೆಗಿನ ಹೂಡಿಕೆಯ ಮೇಲೆ 6.5% ಬಡಿದರವನ್ನು ನೀಡುತ್ತದೆ.
Punjab National Bank:
ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಎರಡು ವರ್ಷಗಳ ವರೆಗಿನ ಹೂಡಿಕೆ ಮೇಲೆ ಏಳು ಪ್ರತಿಶತ ಹಾಗೂ ಮೂರು ವರ್ಷಗಳವರೆಗಿನ ಹೂಡಿಕೆಯ ಮೇಲೆ 6.5%.
Canara Bank:
ಕೆನರಾ ಬ್ಯಾಂಕ್ ನಲ್ಲಿ ಎರಡು ವರ್ಷಗಳವರೆಗಿನ ಹೂಡಿಕೆ ಮೇಲೆ 6.8 ಪ್ರತಿಶತ ಹಾಗೂ ಮೂರು ವರ್ಷಗಳವರೆಗಿನ ಹೂಡಿಕೆಯ ಮೇಲೆ 6.7 ಪ್ರತಿಶತ ಬಡ್ಡಿದರ.
Cooperative Bank:
ಕೋಆಪರೇಟಿವ್ ಬ್ಯಾಂಕ್ ನಲ್ಲಿ ಎರಡು ವರ್ಷಗಳವರೆಗಿನ ಡೆಪಾಸಿಟ್ ಮೇಲೆ ಏಳು ಪ್ರತಿಶತ ಹಾಗೂ ಮೂರು ವರ್ಷಗಳವರೆಗಿನ ಡೆಪಾಸಿಟ್ ಮೇಲೆ ಕೂಡ ಏಳು ಪ್ರತಿಶತ ಬಡ್ಡಿದರ ನಿಗದಿಯಾಗಿದೆ.
Token Bank:
ಟೋಕನ್ ಬ್ಯಾಂಕ್ ನಲ್ಲಿ ಎರಡರಿಂದ ಮೂರು ವರ್ಷಗಳವರೆಗಿನ ಹೂಡಿಕೆಯ ಮೇಲೆ ಏಳು ಪ್ರತಿಶತ ಬಡ್ಡಿದರ ನೀಡಲಾಗುತ್ತದೆ.
Axis Bank:
ಆಕ್ಸಿಸ್ ಬ್ಯಾಂಕ್ ನಲ್ಲಿ ಎರಡು ವರ್ಷಗಳವರೆಗಿನ ಠೇವಣಿ ಮೇಲೆ 7.1 ಹಾಗೂ ಮೂರು ವರ್ಷಗಳವರೆಗಿನ ಠೇವಣಿಯ ಮೇಲೆ ಏಳು ಪ್ರತಿಶತ ಬಡ್ಡಿದರ ನೀಡಲಾಗುತ್ತದೆ.
Bank of Credit:
ಬ್ಯಾಂಕ್ ಆಫ್ ಕ್ರೆಡಿಟ್ ನಲ್ಲಿ ಎರಡು ವರ್ಷಗಳವರೆಗಿನ ಹೂಡಿಕೆಯ ಮೇಲೆ 7.15 ಪ್ರತಿಶತ ಹಾಗೂ ಮೂರು ವರ್ಷಗಳವರೆಗಿನ ಹೂಡಿಕೆ ಮೇಲೆ 6.5 ಪ್ರತಿಶತ ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದಾಗಿದೆ.