ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಪ್ರತಿಯೊಬ್ಬರೂ ಕೂಡ ಈ ಸಮಯದಲ್ಲಿ ಪ್ರಮುಖವಾಗಿ ಹಣವನ್ನ ಎಲ್ಲಿ ಹೂಡಿಕೆ ಮಾಡುತ್ತಾರೆ ಅಂತ ಅಂದ್ರೆ ಅದು ಖಂಡಿತವಾಗಿ ಫಿಕ್ಸೆಡ್ ಡೆಪಾಸಿಟ್ (Fixed Deposit) ಅಂತ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ.
ದೀರ್ಘಕಾಲದ ಈ ಹೂಡಿಕೆಯ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡುವುದರಿಂದಾಗಿ ಹಣದ ಲಾಭ ಸಿಗುತ್ತೆ ಹಾಗೂ ನೀವು ಹೂಡಿಕೆ ಮಾಡಿರುವಂತಹ ಹಣದ ಸುರಕ್ಷತೆ ಕೂಡ ಇರುತ್ತೆ. ಅದರಲ್ಲಿ ವಿಶೇಷವಾಗಿ ನಿಮಗೆ ಹೆಚ್ಚಿನ ಬಡ್ಡಿದರ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೂಡಿಕೆ ಮೇಲೆ ಸಿಗಬೇಕು ಅಂತ ಅಂದ್ರೆ ನೀವು ಈ ಬ್ಯಾಂಕುಗಳಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಉತ್ತಮ ರಿಟರ್ನ್ ಸಿಗುತ್ತೆ. ಹಾಗಿದ್ರೆ ಬ್ಯಾಂಕುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.
Ujjivan Small Finance Bank:
ಇವುಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವಂತಹ ಸ್ಮಾಲ್ ಫೈನಾನ್ಸ್ ಬ್ಯಾಂಕ್ (Ujjivan Small Finance Bank) ಅಂದ್ರೆ ಅದು ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್. ಇವರ ಅಧಿಕೃತ ವೆಬ್ಸೈಟ್ ಮಾಹಿತಿಯ ಪ್ರಕಾರ 12 ತಿಂಗಳ ಹೂಡಿಕೆ ಮೇಲೆ ಸಾಮಾನ್ಯ ಹೂಡಿಕೆದಾರರಿಗೆ 8.25 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 8.75 ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ. 12 ತಿಂಗಳಿಂದ 560 ದಿನಗಳ ಡೆಪಾಸಿಟ್ ಹೂಡಿಕೆ ಮೇಲೆ 8% ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
Shriram Finance Fixed Deposit:
ಎಲ್ಲಕ್ಕಿಂತ ಹೆಚ್ಚು ಎನ್ನುವ ರೀತಿಯಲ್ಲಿ ಎನ್ ಬಿ ಎಫ್ ಸಿ ಕಂಪನಿ ಆಗಿರುವ ಶ್ರೀರಾಮ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ (Shriram Finance Fixed Deposit) ಮೇಲೆ 12 ತಿಂಗಳ ಫಿಕ್ಸೆಡ್ ಡೆಪಾಸಿಟ್ ಮೇಲೆ 7.96 ಪ್ರತಿಶತದಿಂದ ಬಡ್ಡಿದರವನ್ನು ಪ್ರಾರಂಭಿಸಿದೆ. ಲೇಟೆಸ್ಟ್ ಮಾಹಿತಿ ಪ್ರಕಾರ 50 ತಿಂಗಳ ಹೂಡಿಕೆಯ ಮೇಲೆ ಸಾಮಾನ್ಯ ಗ್ರಾಹಕರಿಗೆ 8.91 ಪ್ರತಿಶತ ಹಾಗೂ ಹಿರಿಯ ನಾಗರಿಕರಿಗೆ 9.45% ಬಡ್ಡಿದರವನ್ನು ನಿಗದಿಪಡಿಸಲಾಗಿದೆ, ನೀವು ನಿಮ್ಮ ಆರ್ಥಿಕ ಸಲಹೆಗಾರರ ಬಳಿ ಸಲಹೆಯನ್ನು ಪಡೆದುಕೊಂಡು ಇಂತಹ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದೆ.