RBI: ವಿವಿಧ ಬ್ಯಾಂಕ್ ಗಳಲ್ಲಿ ಖಾತೆ ಇರುವ ಜನರಿಗೆ ರಿಸರ್ವ್ ಬ್ಯಾಂಕ್ ಹೊಸ ಸೂಚನೆ

Join WhatsApp

ಕೆಲವರು ಸಾಕಷ್ಟು ಕಡೆಗಳಲ್ಲಿ ಕೆಲಸ ಮಾಡಿದ ನಂತರ ಪ್ರತಿಯೊಂದು ಕಡೆಗಳಲ್ಲಿ ಕೂಡ ಸ್ಯಾಲರಿ ಅಕೌಂಟ್ (Salary Account) ಹೊಂದಿರುತ್ತಾರೆ ಹಾಗೂ ಈ ಅಕೌಂಟ್ ಗಳು ಸಮಯಕ್ಕೆ ಅನುಗುಣವಾಗಿ ಸ್ಯಾಲರಿ ಅಕೌಂಟ್ ನಿಂದ ಸೇವಿಂಗ್ ಅಕೌಂಟ್ಗಾಗಿ (Saving Account) ಮಾರ್ಪಡುತ್ತವೆ. ಒಂದಕ್ಕಿಂತ ಹೆಚ್ಚಿನ ಅಕೌಂಟ್ ಗಳನ್ನು ಹೊಂದಿರುವಂತಹ ಜನರು ಎಷ್ಟೆಲ್ಲ ಕಷ್ಟ ಪಡಬೇಕಾಗುತ್ತದೆ ಎನ್ನುವುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

 

Image Credit: Mint
  • ಮಿನಿಮಮ್ ಬ್ಯಾಲೆನ್ಸ್ (Minimum Balance) ಅನ್ನು ಹೊಂದಿರಬೇಕಾದ ನಿಯಮವನ್ನ ಪ್ರತಿಯೊಂದು ಖಾತೆಗಳಲ್ಲಿ ಕೂಡ ಪರಿಪಾಲಿಸಲಾಗುತ್ತದೆ. ನೀವು ನಿಮ್ಮ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಡದೆ ಹೋದಲ್ಲಿ ನಿರ್ದಿಷ್ಟ ಪ್ರಮಾಣದ ಶುಲ್ಕವನ್ನು ಪಾವತಿ ಮಾಡಬೇಕಾಗಿ ಬರುತ್ತದೆ.
  • ಸಾಕಷ್ಟು ಖಾತೆಗಳಲ್ಲಿ ವಾರ್ಷಿಕ ಮೇಂಟೆನೆನ್ಸ್ ಫೀಸ್ (Annual Maintenance Fee), ಹಾಗೂ ಇನ್ನಿತರ ಟ್ರಾನ್ಸಾಕ್ಷನ್ಗಳ ಮೇಲೆ ಕೂಡ ಫೀಸ್ ಅನ್ನು ವರ್ಷಕ್ಕೆ ಒಮ್ಮೆ ಅಥವಾ ನಿಗದಿತ ಸಮಯದಲ್ಲಿ ವಸೂಲು ಮಾಡುವಂತಹ ಸಂಪ್ರದಾಯವನ್ನು ಬ್ಯಾಂಕುಗಳು ಮುಂದುವರಿಸಿಕೊಂಡು ಬಂದಿವೆ.
  • ಸರಿಯಾದ ರೀತಿಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡದೆ ಹೋದಲ್ಲಿ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಅಥವಾ ಕ್ರೆಡಿಟ್ ಸ್ಕೋರ್ (Credit Score) ಹಾಳಾಗುವ ಸಾಧ್ಯತೆ ಇರುತ್ತದೆ. ಮುಂದೆ ಇದು ಲೋನ್ (Loan) ಪಡೆದುಕೊಳ್ಳುವುದಕ್ಕೆ ನಿಮಗೆ ಕಷ್ಟವಾಗುತ್ತದೆ.
Image Credit: The Hindu
  • ಐಟಿಆರ್ ಫೈಲ್ (ITR File) ಮಾಡುವ ಸಂದರ್ಭದಲ್ಲಿ ಇವುಗಳ ಮಾಹಿತಿಯನ್ನು ನೀವು ಸರಿಯಾದ ರೀತಿಯಲ್ಲಿ ಉಲ್ಲೇಖ ಮಾಡದೆ ಹೋದಲ್ಲಿ ಆ ಸಂದರ್ಭದಲ್ಲಿ ಕೂಡ ಇನ್ಕಮ್ ಟ್ಯಾಕ್ಸ್ ಇಲಾಖೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವಂತಹ ಸಾಧ್ಯತೆ ಹೆಚ್ಚಾಗಿದೆ.
  • ಸ್ಯಾಲರಿ ಅಕೌಂಟ್ ಕೂಡ ಮೂರು ತಿಂಗಳ ನಂತರ ಸೇವಿಂಗ್ ಅಕೌಂಟ್ ಆಗಿ ಮಾರ್ಪಡುವಂತಹ ಪ್ರಕ್ರಿಯೆ ಬ್ಯಾಂಕಿಂಗ್ ನಿಯಮಗಳಲ್ಲಿರುತ್ತದೆ. ಹೀಗಾಗಿ ಅಂತಹ ಖಾತೆಗಳನ್ನು ಮುಚ್ಚಿಸುವುದು ಅಥವಾ ಒಂದಕ್ಕಿಂತ ಹೆಚ್ಚಿನ ಖಾತೆಗಳನ್ನು ಹೊಂದದೇ ಇರುವುದು ಉತ್ತಮ.

Leave a Comment

Your email address will not be published. Required fields are marked *

Scroll to Top