ತಮ್ಮದೇ ಆಗಿರುವಂತಹ ಸ್ವಂತ ಉದ್ಯಮವನ್ನು ಪ್ರಾರಂಭಿಸುವುದಕ್ಕೆ ಅಥವಾ ಇರುವಂತಹ ಉದ್ಯಮವನ್ನು ಇನ್ನಷ್ಟು ದೊಡ್ಡಮಟ್ಟದಲ್ಲಿ ವಿಸ್ತರಿಸುವುದಕ್ಕೆ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮುದ್ರಾ ಲೋನ್ ಯೋಜನೆ (Mudra Loan Scheme) ಯನ್ನು 2015 ರಲ್ಲಿ ಜಾರಿಗೆ ತಂದಿದೆ. ಇದರಿಂದಾಗಿ ಸಾಕಷ್ಟು ಜನರು ತಮ್ಮ ಜೀವನವನ್ನು ಕಟ್ಟಿಕೊಂಡಿದ್ದಾರೆ.
ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಬ್ಯಾಂಕ್ ಆಫ್ ಬರೋಡ (Bank Of Baroda) ದಲ್ಲಿ ಮುದ್ರಾ ಲೋನ್ ಯೋಜನೆ (Mudra Loan Scheme) ಅಡಿಯಲ್ಲಿ 5 ಲಕ್ಷಗಳ ಲೋನ್ ಪಡೆದು ಕೊಂಡಾಗ ಯಾವ ರೀತಿಯಲ್ಲಿ ಪ್ರಕ್ರಿಯೆ ಇರುತ್ತೆ ಹಾಗೂ ಎಷ್ಟು ಬಡ್ಡಿ ಬರುತ್ತೆ ಹಾಗೂ ಯಾವ ರೀತಿಯಲ್ಲಿ ಅಪ್ಲೈ ಮಾಡಬಹುದು ಎನ್ನುವಂತಹ ಪ್ರತಿಯೊಂದು ಮಾಹಿತಿಗಳ ಬಗ್ಗೆ ಕೂಡ ನಿಮಗೆ ವಿವರಿಸಲು ಹೊರಟಿದ್ದೇವೆ. ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.
ಅರ್ಹತೆಗಳು – ಬೇಕಾಗುವ ಡಾಕ್ಯುಮೆಂಟ್ಸ್:
- ಮೊದಲಿಗೆ ನೀವು ಭಾರತೀಯರಾಗಿರಬೇಕು. ಬ್ಯಾಂಕ್ ಆಫ್ ಬರೋಡದ (Bank of Baroda) ಗ್ರಾಹಕರಿಗೆ ಮಾತ್ರ ಇದು ಸಿಗುತ್ತೆ. ಮ್ಯಾನುಫ್ಯಾಕ್ಚರಿಂಗ್ ಸರ್ವಿಸ್ ಹಾಗೂ ಟ್ರೇಡಿಂಗ್ ಕಂಪನಿಗಳಿಗೆ ಮಾತ್ರ ಸಿಗುತ್ತೆ. ನೀವು ಪಡೆದುಕೊಳ್ಳುವಂತಹ 5 ಲಕ್ಷ ರೂಪಾಯಿಗಳ ಲೋನ್ ಮೇಲೆ ನೀವು 8.60 ರಿಂದ 11.15 ಪರ್ಸೆಂಟ್ ವಾರ್ಷಿಕ ಬಡ್ಡಿ ದರವನ್ನ ಪಾವತಿ ಮಾಡಬೇಕಾಗಿರುತ್ತದೆ.
- ಐಡಿ ಕಾರ್ಡ್
- ಕೊನೆಯ ಎರಡು ತಿಂಗಳುಗಳ ಯುಟಿಲಿಟಿ ಬಿಲ್
- ನಿಮ್ಮ ಬಿಸಿನೆಸ್ ಅಡ್ರೆಸ್ ಒಂದು ಹೊಂದಿರುವಂತಹ ದಾಖಲೆಗಳು
- ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ
- ಲೋನ್ ಬೇಕಾಗಿರುವಂತಹ ನಿಮ್ಮ ವ್ಯಾಪಾರ ಅಥವಾ ಉದ್ಯಮದ ಸಂಪೂರ್ಣ ಮಾಹಿತಿ. ಇವಿಷ್ಟು ಡಾಕ್ಯುಮೆಂಟ್ಸ್ ಗಳನ್ನು ನೀವು ಒದಗಿಸಬೇಕಾಗಿರುತ್ತದೆ.
ಮುದ್ರಾ ಲೋನ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:
- ಬ್ಯಾಂಕ್ ಆಫ್ ಬರೋಡದ (Bank of Baroda) ಅಧಿಕೃತ ವೆಬ್ಸೈಟ್ಗೆ ಹೋಗಿ ಡಿಜಿಟಲ್ ಮುದ್ರಾ ಲೋನ್ ಯೋಜನೆ (Mudra Loan Scheme) ಗೆ ಅಪ್ಲೈ ಮಾಡುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ.
- ಇಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ವೆರಿಫಿಕೇಷನ್ ಮಾಡಿ ನಂತರ ಓಟಿಪಿಯನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
- ನಿಮ್ಮ ಪರ್ಸನಲ್ ಡೀಟೇಲ್ಸ್ ಅನ್ನು ಅಪ್ಲೋಡ್ ಮಾಡುವ ಮೂಲಕ ವೆಬ್ ಸೈಟ್ ನಲ್ಲಿ ನಿಮ್ಮ ಲಾಗಿನ್ ಐಡಿ ಪಾಸ್ವರ್ಡ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕಾಗಿರುತ್ತದೆ.
- ಇದಾದ ನಂತರ ಮತ್ತೆ ನಿಮ್ಮ ಲಾಗಿನ್ ಐಡಿ ಮೂಲಕ ವೆಬ್ ಸೈಟ್ ಗೆ ಹೋಗಿ ಮುದ್ರಾ ಲೋನ್ ಯೋಜನೆ ಅಡಿಯಲ್ಲಿ ನಿಮ್ಮ ಬಿಸಿನೆಸ್ ಗೆ ಲೋನ್ ರಿಕ್ವೆಸ್ಟ್ ಮಾಡುವಂತಹ ಆಪ್ಶನ್ ಮೇಲೆ ಕ್ಲಿಕ್ ಮಾಡಿ ಕೇಳುವಂತಹ ಪ್ರತಿಯೊಂದು ಮಾಹಿತಿಗಳನ್ನು ಅಪ್ಲೋಡ್ ಮಾಡಬೇಕು.
- ಅಪ್ಲಿಕೇಶನ್ ಫಾರ್ಮ್ ನಲ್ಲಿ ಪ್ರತಿಯೊಂದು ಮಾಹಿತಿಗಳನ್ನು ಫಿಲ್ ಮಾಡಿದ ನಂತರ ಎಲ್ಲಾ ಪ್ರಕ್ರಿಯೆ ಮುಗಿಯುತ್ತದೆ ಹಾಗೂ ಬ್ಯಾಂಕಿನ ಕಡೆಯಿಂದ ಎಲ್ಲಾ ವೆರಿಫಿಕೇಷನ್ ನಡೆಸಿದ ನಂತರ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.