ಇಂದು ಹಣ ಸೇವಿಂಗ್ಸ್ ಅನ್ನೋದು ಪ್ರತಿಯೊಬ್ಬರಿಗೂ ಬಹಳ ಅಗತ್ಯ, ಯಾಕಂದ್ರೆ ಕಷ್ಟ ದ ಸಮಯದಲ್ಲಿ ಹಣ ಬೇಕು ಅಂದಾಗ ಕೂಡಿಟ್ಟ ಹಣ ಹೆಚ್ಚು ಉಪಯೋಗಕ್ಕೆ ಬರಲಿದೆ. ಹಾಗಾಗಿ ದುಡಿದ ಸ್ವಲ್ಪ ಭಾಗವಾದರೂ ಹೆಚ್ಚಿನ ಜನ ಸೇವಿಂಗ್ ಮಾಡಿ ಇರುತ್ತಾರೆ. ಆದರೆ ಬ್ಯಾಂಕ್ ನಲ್ಲಿ ಹಣ ಸೇವಿಂಗ್ ಮಾಡುವಾಗ ಅದರ ಮಿತಿ, ಎಷ್ಟು ಬಡ್ಡಿ ಬೀಳಲಿದೆ ಇತ್ಯಾದಿ ತಿಳಿಯುದು ಕೂಡ ಬಹಳ ಅಗತ್ಯವಾಗಿ ಇರಲಿದೆ.
ಇಂದು ಸೇವಿಂಗ್ ಅಂತ ಬಂದಾಗ ಉಳಿತಾಯ ಬ್ಯಾಂಕ್ ಖಾತೆ (Savings Bank Account) ಯನ್ನು ನಾವು ತೆರೆಯಲೇಬೇಕು. ಹಾಗಾಗಿ ಹೆಚ್ಚಿನ ಜನರು ವಿವಿಧ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ (Savings Account) ತೆರೆಯುತ್ತಾರೆ. ಬ್ಯಾಂಕ್ ಖಾತೆ ತೆರೆಯಲು ಯಾವುದೇ ರೀತಿಯ ನಿರ್ಬಂಧವಿಲ್ಲ. ಈ ಕಾರಣದಿಂದಾಗಿ, ಪ್ರತಿಯೊಬ್ಬ ವ್ಯಕ್ತಿಯು ಎರಡು ಅಥವಾ ಹೆಚ್ಚಿನ ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ.
ಆದರೆ ನಿಮ್ಮ ಉಳಿತಾಯ ಖಾತೆಯಲ್ಲಿ ನೀವು ಎಷ್ಟು ಹಣ ಇಡಬಹುದು ಎನ್ನುವ ಬಗ್ಗೆ ನಿಮಗೆ ಅರಿವು ಇರಬೇಕು. ಇದಕ್ಕಾಗಿ ಆದಾಯ ಇಲಾಖೆ ಇದೀಗ ಹೊಸ ನಿಯಮ ಜಾರಿ ಮಾಡಿದ್ದು ಈ ಬಗ್ಗೆ ನೀವು ತಿಳಿಯಲೇ ಬೇಕು. ಹೌದು ನಿಮ್ಮ ಉಳಿತಾಯ ಖಾತೆಯಲ್ಲಿ ನಿಮ್ಮ ಬಳಿ ಇದ್ದಷ್ಟು ಹಣವನ್ನು ನೀವು ಇಡಬಹುದು, ಇದಕ್ಕೆ ಯಾವುದೇ ಮಿತಿ ಇಲ್ಲ. ಆದರೆ ನಿಮ್ಮ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವು ಅಧಿಕ ವಾಗಿದ್ದರೆ ಮತ್ತು ಆದಾಯ ತೆರಿಗೆ (Income Tax) ಮಿತಿ ಗಿಂತ ಹೆಚ್ಚಾದರೆ ನೀವು ಆ ಆದಾಯದ ಮೂಲವನ್ನು ತಿಳಿಸಬೇಕು. ನೀವು ಆದಾಯದ ಸರಿಯಾದ ಮೂಲವನ್ನು ಐಟಿ ಇಲಾಖೆಗೆ ತಿಳಿಸದಿದ್ದರೆ ಅದು ನೋಟಿಸ್ ಜಾರಿಗೊಳಿಸಿ ಹಣವನ್ನು ಹಿಂಪಡೆಯುತ್ತದೆ.
ಈ ನಿಯಮ ಇರಲಿದೆ:
- ಆದಾಯ ತೆರಿಗೆಯ ಮೂಲಕ 50,000 ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ, ನೀವು ನಿಮ್ಮ ಪ್ಯಾನ್ ಮಾಹಿತಿ ಯನ್ನು ನೀಡಬೇಕಾಗುತ್ತದೆ.
- ಒಂದು ಹಣಕಾಸು ವರ್ಷದಲ್ಲಿ ಉಳಿತಾಯ ಖಾತೆಯಲ್ಲಿನ ಮೊತ್ತ 10 ಲಕ್ಷ ಮೀರಿದರೆ, ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಲು ಬ್ಯಾಂಕ್ಗಳ ನಿರ್ಬಂಧವಿದೆ. ನೀವು 10 ಲಕ್ಷಕ್ಕಿಂತ ಹೆಚ್ಚಿನ ನಗದು ಮೊತ್ತಕ್ಕೆ ಆದಾಯದ ಪುರಾವೆಗಳನ್ನು ಒದಗಿಸಬೇಕಾಗುತ್ತದೆ.
- ನೀವು ಒಂದು ದಿನದಲ್ಲಿ 1,000 ರೂ.ವರೆಗೆ ನಗದು ರೂಪದಲ್ಲಿ ಠೇವಣಿ ಇಡಬಹುದು. ಅಲ್ಲದೆ, ನಿಮ್ಮ ಖಾತೆಯಲ್ಲಿ ನೀವು ನಿರಂತರವಾಗಿ ಹಣವನ್ನ ಠೇವಣಿ ಮಾಡದಿದ್ದರೆ, ಈ ಮಿತಿ 2.50 ಲಕ್ಷ ರೂ.ವರೆಗೆ ಇಡಲು ಅವಕಾಶ ಇದೆ.
- ಚಾಲ್ತಿ ಖಾತೆಯಲ್ಲಿ ಠೇವಣಿ ಮಿತಿ 50 ಲಕ್ಷ ರೂ. ಈ ಮಿತಿ ಮೀರಿದರೆ ಹಣದ ಮೂಲದ ಬಗ್ಗೆ ನಿಖರವಾದ ಮಾಹಿತಿಯನ್ನು ಐಟಿ ಇಲಾಖೆಗೆ ನೀಡಲೇ ಬೇಕು
ಒಟ್ಟಿನಲ್ಲಿ ಬ್ಯಾಂಕಿನಲ್ಲಿ ಹಣವನ್ನು ಸುರಕ್ಷಿತವಾಗಿ ಇಡಲು, ಬ್ಯಾಲೆನ್ಸ್ಗೆ ಯಾವುದೇ ಮಿತಿಯಿಲ್ಲದಿದ್ದರೂ, ದೊಡ್ಡ ಮೊತ್ತದ ನಗದು ಠೇವಣಿ ಮಿತಿಗಳನ್ನು ಮೀರಿದರೆ, ಆದಾಯ ತೆರಿಗೆ ಇಲಾಖೆ ನಿಮ್ಮಮೇಲೆ ಕಣ್ಣಿಡಲಿದೆ.