ಬ್ಯಾಂಕಿನ ಲೋನಿಂಗ್ ಭಾಷೆಯಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಸಿಬಿಲ್ ಸ್ಕೋರ್ (CIBIL Score) ಎನ್ನುವುದು ಅತ್ಯಂತ ಪ್ರಮುಖವಾಗಿರುವಂತಹ ವಿಚಾರವಾಗಿರುತ್ತದೆ. ಇದು ನೀವು ಈ ಹಿಂದೆ ಪಡೆದುಕೊಂಡಿರುವಂತಹ ಸಾಲದ ಹಿಸ್ಟರಿ, ಅದನ್ನ ಮರುಪಾವತಿ ಯಾವ ರೀತಿಯಲ್ಲಿ ಮಾಡಿದ್ದೀರಿ ಹಾಗೂ ನಿಮ್ಮ ಹಣಕಾಸಿನ ಟ್ರಾನ್ಸಾಕ್ಷನ್ ಯಾವ ರೀತಿಯಲ್ಲಿ ಇತ್ತು ಎನ್ನುವುದಕ್ಕೆ ರಿಪೋರ್ಟ್ ಕಾರ್ಡ್ ಎಂದು ಹೇಳಬಹುದಾಗಿದೆ.
ಇದನ್ನು ಗಮನಿಸಿದ ನಂತರ ಇದು ಉತ್ತಮ ಸ್ಥಿತಿಯಲ್ಲಿ ಇದ್ದರೆ ಮಾತ್ರ ಬ್ಯಾಂಕುಗಳು ನೀವು ಕೇಳುವಂತಹ ಲೋನ್ (Loan) ಹಣವನ್ನು ನೀಡುವುದಕ್ಕೆ ಒಪ್ಪಿಕೊಳ್ಳಬಹುದಾಗಿದೆ. ಒಂದು ವೇಳೆ ಇದರಲ್ಲಿ ನಿರೀಕ್ಷಿತ ಸಿಬಿಲ್ ಸ್ಕೋರ್ (CIBIL Score) ಇಲ್ಲದೆ ಹೋದಲ್ಲಿ ಬ್ಯಾಂಕುಗಳು ನಿಮಗೆ ಲೋನ್ ಕೊಡದೆ ಇರಬಹುದಾಗಿದೆ.
300 ರಿಂದ 550 ಅಂಕಗಳ ನಡುವೆ ಇರುವಂತಹ ಸ್ಕೋರ್ ಅನ್ನು ಅತ್ಯಂತ ದುರ್ಬಲ ಎಂಬುದಾಗಿ ಪರಿಗಣಿಸಲಾಗುತ್ತದೆ. 550 ರಿಂದ 650ರ ನಡುವೆ ಇರುವಂತಹ ಸ್ಕೋರ್ ಅನ್ನು ಆವರೇಜ್ ಎಂಬುದಾಗಿ ಪರಿಗಣಿಸಲಾಗುತ್ತದೆ. 650 ರಿಂದ 750ರ ನಡುವೆ ಇರುವಂತಹ ಸಿಬಿಲ್ ಸ್ಕೋರ್ (CIBIL Score) ಉತ್ತಮ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ 750 ರಿಂದ 900 ನಡುವೆ ಇರುವಂತಹ ಸ್ಕೋರ್ ಅತ್ಯುತ್ತಮ ಹಾಗೂ ಪರ್ಫೆಕ್ಟ್ ಎಂಬುದಾಗಿ ಪರಿಗಣಿಸಲಾಗುತ್ತದೆ. ಇದಕ್ಕೆ ಯಾವುದೇ ಅನುಮಾನವಿಲ್ಲದೆ ಲೋನ್ ಸಿಗುತ್ತೆ.
ಹೋಂ ಲೋನ್ (Home Loan) ಪಡೆದುಕೊಳ್ಳುವುದಕ್ಕೆ ಇಷ್ಟು ಸಿಬಿಲ್ ಸ್ಕೋರ್ ಇರಲೇಬೇಕು:
ಕನಿಷ್ಠ ಪಕ್ಷ ನಿಮ್ಮ ಸಿಬಿಲ್ ಸ್ಕೋರ್ (CIBIL Score) 650 ರಿಂದ 750 ರವರೆಗೆ ಇದ್ರೆ ಮಾತ್ರ ಬ್ಯಾಂಕ್ ನಿಮಗೆ ಲೋನ್ ಕೊಡುವುದಕ್ಕೆ ಯೋಚನೆ ಮಾಡಬಹುದಾಗಿದೆ. ಅದಕ್ಕಿಂತ ಕಡಿಮೆ ಇರಬಾರದು. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ 750 ರಿಂದ 900ರ ನಡುವೆ ಇದ್ದರೆ ಮಾತ್ರ ಯಾವುದೇ ಅನುಮಾನವಿಲ್ಲದೆ ಬ್ಯಾಂಕುಗಳು ನೀವು ಕೇಳುವಂತಹ ಲೋನ್ ಅನ್ನು ನೀಡಿ ಬಿಡುತ್ತಾರೆ. ಈ ಮೂಲಕ ನೀವು ನಿಮ್ಮ ಕನಸಿನ ಮನೆಯನ್ನ ಕಟ್ಟಿಕೊಳ್ಳಬಹುದಾಗಿದೆ.