ಪ್ರತಿಯೊಬ್ಬರು ಕೂಡ ತಮ್ಮ ನಿವೃತ್ತಿ ಜೀವನದ ನಂತರ ಆರ್ಥಿಕ ಸ್ವಾತಂತ್ರ್ಯವನ್ನು ಬಯಸುತ್ತಾರೆ. ಆ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಬಯಸುವಂತಹ ಒಂದೇ ಒಂದು ಹೂಡಿಕೆಯ ವಿಧಾನ ಅಂತ ಅಂದ್ರೆ ಅದು ಫಿಕ್ಸೆಡ್ ಡೆಪಾಸಿಟ್ (Fixed Deposit).
ದೊಡ್ಡ ಮಟ್ಟದಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನಿವೃತ್ತಿ ಜೀವನದ ನಂತರ ನಿಯಮಿತವಾಗಿ ಬಡ್ಡಿ ರೂಪದಲ್ಲಿ ಹಣವನ್ನು ಪಡೆದುಕೊಳ್ಳುವುದು ಹಾಗೂ ಬೇಕಾದಾಗ ದೊಡ್ಡ ಮಟ್ಟದಲ್ಲಿ ತಾವು ಹಾಕಿರುವಂತಹ ಬಂಡವಾಳವನ್ನ ಹಿಂಪಡೆದುಕೊಳ್ಳಬಹುದಾಗಿದೆ. ಅದರಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ಸಾಮಾನ್ಯ ನಾಗರಿಕರಿಗೆ ಹೋಲಿಸಿದರೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತದೆ. ಹೇಗಿದ್ರು ಕೂಡ ಫಿಕ್ಸೆಡ್ ಡೆಪಾಸಿಟ್ (Fixed Deposit) ಹೂಡಿಕೆಯ ಮೇಲೆ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿ ದರವನ್ನು ಯಾವೆಲ್ಲ ಬ್ಯಾಂಕುಗಳಲ್ಲಿ ಪಡೆದುಕೊಳ್ಳಬಹುದು ಎಂಬುದನ್ನು ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ.
ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ (Fixed Deposit) ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡುವ ಬ್ಯಾಂಕುಗಳು:
- ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 365, 730 ಹಾಗೂ 1095 ದಿನಗಳ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಹಿರಿಯ ನಾಗರಿಕರಿಗೆ 8.75 ಪ್ರತಿಶತ ಬಡ್ಡಿದರ ಸಿಗುತ್ತೆ.
- ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 444 ದಿನಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 9% ಬಡ್ಡಿದರ ಸಿಗುತ್ತೆ.
- ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 730, 1095 ಹಾಗೂ 1500 ದಿನಗಳ ವರೆಗಿನ ಹೂಡಿಕೆಯ ಮೇಲೆ ಹಿರಿಯ ನಾಗರಿಕರಿಗೆ 9.10 ಪ್ರತಿಶತ ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
- ಮೂರು ವರ್ಷಗಳವರೆಗಿನ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 9.10 ಪ್ರತಿಶತ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ.
- ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಹಿರಿಯ ನಾಗರಿಕರಿಗೆ ಫಿಕ್ಸೆಡ್ ಡೆಪಾಸಿಟ್ ಹೂಡಿಕೆಯ ಮೇಲೆ 1001 ದಿನಗಳ ಹೂಡಿಕೆಯ ಮೇಲೆ 9.50% ಹೈಯೆಸ್ಟ್ ಬಡ್ಡಿದರ ಸಿಗಲಿದೆ.