ಫಿಕ್ಸೆಡ್ ಡಿಪೋಸಿಟ್ ಹೂಡಿಕೆಯನ್ನುವುದು ದೀರ್ಘಕಾಲಿಕ ಹೂಡಿಕೆಯ ವಿಚಾರದಲ್ಲಿ ಸಾಕಷ್ಟು ಲಾಭದಾಯಕವಾಗಿ ಹಾಗೂ ಸುರಕ್ಷಿತವಾಗಿರುವಂತಹ ಹೂಡಿಕೆ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಫಿಕ್ಸೆಡ್ ಡೆಪಾಸಿಟ್ (Fixed Deposit) ಹೂಡಿಕೆಯನ್ನುವುದು ಏಳು ದಿನಗಳಿಂದ ಪ್ರಾರಂಭಿಸಿ 10 ವರ್ಷಗಳವರೆಗೆ ಕೂಡ ಸಮಯಾವಧಿಯನ್ನು ಹೊಂದಿರುತ್ತವೆ.
ನೀವು ಎಷ್ಟು ದೀರ್ಘಕಾಲದವರಿಗೆ ಹಣವನ್ನು ಹೂಡಿಕೆ ಮಾಡಿರುತ್ತಿರೋ ಅಷ್ಟರ ಮಟ್ಟಿಗೆ ಲಾಭವನ್ನು ಪಡೆದುಕೊಳ್ಳಬಹುದಾಗಿದ್ದು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ಒಂದು ವರ್ಷದ ಅವಧಿಗೆ ನೀವು ಫಿಕ್ಸೆಡ್ ಡೆಪಾಸಿಟ್ (Fixed Deposit) ಹಣವನ್ನು ಹೂಡಿಕೆ ಇಟ್ರೆ ನಿಮಗೆ ಯಾವೆಲ್ಲ ಬ್ಯಾಂಕ್ ನಲ್ಲಿ ಅತ್ಯುತ್ತಮ ರಿಟರ್ನ್ ಸಿಗುತ್ತದೆ ಎನ್ನುವುದನ್ನು ತಿಳಿಯೋಣ ಬನ್ನಿ.
ಒಂದು ವರ್ಷಕ್ಕೆ ಹೆಚ್ಚಿನ ಬಡ್ಡಿದರವನ್ನು ನೀಡುವ ಫಿಕ್ಸೆಡ್ ಡೆಪಾಸಿಟ್ (Fixed Deposit) ಯೋಜನೆ ಹೊಂದಿರುವ ಬ್ಯಾಂಕುಗಳು:
Small Finance Banks:
- ಎ ಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ 7.25 ಪ್ರತಿಶತ
- ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8.2%
- ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8.25%
- ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8.25 ಪ್ರತಿಶತ.
- ಯುನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 7.85 ಪ್ರತಿಶತ
- ಉತ್ಕರ್ಷ ಸ್ಮಾಲ್ ಫೈನಾನ್ಸ್ ಬ್ಯಾಂಕ್ 8 ಪ್ರತಿಶತ.
Private Banks:
- ಬಂಧನ್ ಬ್ಯಾಂಕ್ 7.25%
- ಸಿಟಿ ಯೂನಿಯನ್ ಬ್ಯಾಂಕ್ ಏಳು ಪ್ರತಿಶತ.
- ಡಿ ಬಿ ಎಸ್ ಬ್ಯಾಂಕ್ 7 ಪ್ರತಿಶತ.
- ಡಿಸಿಬಿ ಬ್ಯಾಂಕ್ 7.1%.
- ಇಂಡಸ್ ಐಎನ್ ಡಿ ಬ್ಯಾಂಕ್ ನಲ್ಲಿ 7.75 ಪ್ರತಿಶತ
- ಜಮ್ಮು ಕಾಶ್ಮೀರ್ ಬ್ಯಾಂಕ್, ಕರೂರ್ ವ್ಯವಸಾಯ ಬ್ಯಾಂಕ್ ಹಾಗೂ ತಮಿಳುನಾಡು ಮರ್ರ್ಸನ್ಟೈಲ್ ಬ್ಯಾಂಕ್ ನಲ್ಲಿ ಏಳು ಪ್ರತಿಶತ ಬಡ್ಡಿದರವನ್ನು ನೀಡಲಾಗುತ್ತದೆ.
- ಕೋಟಕ್ ಮಹೀಂದ್ರಾ ಬ್ಯಾಂಕ್ ಹಾಗೂ ಕರ್ನಾಟಕ ಬ್ಯಾಂಕ್ ನಲ್ಲಿ 7.1% ಬಡ್ಡಿ ದರವನ್ನು ನೀಡಲಾಗುತ್ತದೆ.
- ಎಸ್ ಬ್ಯಾಂಕ್ ನಲ್ಲಿ 7.25 ಪ್ರತಿಶತ ಬಡ್ಡಿ ದರವನ್ನು ನೀಡಲಾಗುತ್ತದೆ.
Public Sector Banks:
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ 6.8 ಪ್ರತಿಶತ.
- ಬ್ಯಾಂಕ್ ಆಫ್ ಬರೋಡ, ಕೆನರಾ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 6.85 ಪ್ರತಿಶತ.