ಟಾಟಾ ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಅತ್ಯಂತ ಹೆಚ್ಚು ಗ್ರಾಹಕರನ್ನು ಹೊಂದಿರುವಂತಹ ಸಂಸ್ಥೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಪ್ರಮುಖವಾಗಿರುವ ಅಂತಹ ಕಾರಣ ಸಿಗುವಂತಹ ಫೀಚರ್ ಗಳು ಹಾಗೂ ಸುರಕ್ಷತೆಯ ವಿಚಾರದಲ್ಲಿ ಟಾಟಾ (Tata) ಸಂಸ್ಥೆ ನೀಡುವಂತಹ ಭರವಸೆ.
ಇನ್ನು ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಕಾರುಗಳ (Electric Cars) ಪೈಕಿಯಲ್ಲಿ ದೊಡ್ಡಮಟ್ಟದ ಬೇಡಿಕೆಯನ್ನು ಹೊಂದಿರುವ Tata Nexon ಎಲೆಕ್ಟ್ರಿಕ್ ಕಾರಿನ ಬೆಲೆ ಕಡಿಮೆ ಆಗಿರುವುದರ ಬಗ್ಗೆ.
Tata Nexon ಎಲೆಕ್ಟ್ರಿಕ್ ಕಾರಿನ ಬೆಲೆಯಲ್ಲಿ ಇಳಿಕೆ:
ಅಕ್ಟೋಬರ್ 31ರವರೆಗೆ ಟಾಟಾ ಸಂಸ್ಥೆ ಟಾಟಾ ನೆಕ್ಸನ್ ಕಾರಿನ (Tata Nexon EV) ಮೇಲೆ ಬೇಸ್ ವೇರಿಯಂಟ್ 12.49 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಇದ್ದು ಇದನ್ನು 2 ಲಕ್ಷ ರೂಪಾಯಿಗಳ ವರೆಗೆ ಕಡಿಮೆ ಮಾಡಿದ್ದು ಹಾಗೂ ಟಾಪ್ ವೇರಿಯಂಟ್ 16.29 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಇದ್ದು ಇದರ ಮೇಲೆ ಮೂರು ಲಕ್ಷ ರೂಪಾಯಿಗಳ ಇಳಿಕೆಯನ್ನು ಮಾಡಿದೆ. ಹಬ್ಬದ ಸೀಸನ್ ಬರ್ತಾ ಇದ್ದಂತೆ ಟಾಟಾ ಸಂಸ್ಥೆ ಈ ನಿರ್ಧಾರವನ್ನು ಮಾಡಿದೆ.
ಇದರ ಜೊತೆಗೆ Tiago ಎಲೆಕ್ಟ್ರಿಕ್ ಕಾಲಿನ (Tiago EV) ಮೇಲೆ 40,000 ಹಾಗೂ ಟಾಟಾ ಪಂಚ್ ಎಲೆಕ್ಟ್ರಿಕ್ ಕಾರಿನ (Tata Punch EV) ಮೇಲೆ 1 ಲಕ್ಷ ರೂಪಾಯಿಗಳ ಬೆಲೆ ಇಳಿಕೆಯನ್ನು ಕೂಡ ಮಾಡಿರುವುದು ತಿಳಿದುಬಂದಿದೆ. ಈ ಸಮಯದಲ್ಲಿ ಸೇಲಾಗುವಂತಹ ಪ್ರತಿಯೊಂದು ಕಾರುಗಳಿಗೂ ಕೂಡ ಆರು ತಿಂಗಳವರೆಗೆ ಫ್ರೀ ಚಾರ್ಜ್ ನೀಡಲಾಗುತ್ತದೆ. ಇನ್ನು ಟಾಟಾ ನೆಕ್ಸನ್ ಕಾರಿನ ಬೇಸಿಕ್ ವೇರಿಯಂಟ್ 325 km ರೇಂಜ್ ನೀಡಿದ್ರೆ ಟಾಪ್ ವೇರಿಯಂಟ್ 465kmಗಳ ರೇಂಜ್ ನೀಡುತ್ತದೆ.