Ola ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳ ವಿಚಾರದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲೀಡಿಂಗ್ ಕಂಪನಿಯಾಗಿ ಕಾಣಿಸಿಕೊಳ್ಳುತ್ತಿದ್ದು ಈಗ Ola Roadster Series ಎಲೆಕ್ಟ್ರಿಕ್ ಬೈಕುಗಳ ಲಾಂಚ್ ಅನ್ನು ಕೂಡ ಮಾಡಿದ್ದು ಬನ್ನಿ ಇದರ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Ola Roadster:
Ola Roadster ಮೂರು ಬ್ಯಾಟರಿ ವೇರಿಯಂಟ್ ಗಳಲ್ಲಿ ನಿಮಗೆ ಸಿಗುತ್ತದೆ. ಇದರ ಬೆಲೆ ಬಗ್ಗೆ ಮಾತನಾಡುವುದಾದರೆ 1.04 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 1.39 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯವರೆಗೆ ಟಾಪ್ ವೇರಿಯಂಟ್ ಅನ್ನು ನೀವು ಕಾಣಬಹುದಾಗಿದೆ. ಇನ್ನು ಈ ಎಲೆಕ್ಟ್ರಿಕ್ ಬೈಕ್ 579 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ.
Ola Roadster Pro:
Roadster Pro ಎಲೆಕ್ಟ್ರಿಕ್ ಬೈಕ್ 194 ಕಿಲೋಮೀಟರ್ಗಳ ಟಾಪ್ ಸ್ಪೀಡ್ ನಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಇದು ಕೂಡ 579 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಬೈಕಿನ ಬೆಲೆ 1.99 ರಿಂದ 2.49 ಲಕ್ಷ ರೂಪಾಯಿಗಳ ಬೆಲೆಯಲ್ಲಿ ಕಂಡು ಬರುತ್ತದೆ.
Ola Roadster X:
Roadster X ಎಲೆಕ್ಟ್ರಿಕ್ ಬೈಕ್ 124 ಕಿಲೋಮೀಟರ್ ಪ್ರತಿ ಗಂಟೆಯ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ. ಇದು 2.5 ಕಿಲೋ ವ್ಯಾಟ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು 74,999 ಲಕ್ಷರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದನ್ನು ನೀವು ಖರೀದಿ ಮಾಡಬಹುದಾಗಿದೆ.
ಓಲಾ ಸಂಸ್ಥೆಯ ಅಧಿಕೃತ ವೆಬ್ ಸೈಟ್ ನಲ್ಲಿ ಹೋಗಿ ನೀವು ಈ ಎಲೆಕ್ಟ್ರಿಕ್ ಬೈಕ್ ಗಳ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದ್ದು, ಖರೀದಿಸುವಂತಹ ಆಸಕ್ತಿ ಇದ್ರೆ ಹತ್ತಿರದ ಓಲಾ ಶೋರೂಮ್ ಗೆ ಹೋಗಬಹುದಾಗಿದೆ.