ಭಾರತದ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಈಗ ಹೆಚ್ಚಾಗುತ್ತಿರುವಂತಹ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಕಾರಣದಿಂದಾಗಿ ಮತ್ತು ಪರಿಸರ ಮಾಲಿನ್ಯದ ಕಾರಣದಿಂದಾಗಿ ಈಗ ಎಲೆಕ್ಟ್ರಿಕ್ ಕಾರುಗಳನ್ನು (Electric Car) ಖರೀದಿ ಮಾಡುವಂತಹ ಗ್ರಹಕರ ಸಂಖ್ಯೆ ಹೆಚ್ಚಾಗಿದೆ. ಕಾರ್ ನಿರ್ಮಾಣ ಮಾಡುವಂತಹ ಕಂಪನಿಗಳು ಕೂಡ ಎಲೆಕ್ಟ್ರಿಕ್ ವೆಹಿಕಲ್ ವಿಭಾಗದಲ್ಲಿ ಕೂಡ ಕಾರುಗಳನ್ನು ಹೆಚ್ಚಾಗಿ ಲಾಂಚ್ ಮಾಡುತ್ತಿವೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳಲು ಹೊರಟಿರೋದು ಹೊಸದಾಗಿ ಲಾಂಚ್ ಆಗಿರುವ ಕಿಯಾ ಸಂಸ್ಥೆಯ ಕಾರಿನ ಬಗ್ಗೆ.
Kia EV3 ಕಾರಿನ ಫುಲ್ ಡೀಟೇಲ್ಸ್ ಹಾಗೂ ಬೆಲೆ:
Kia EV3 ಕಾರಿನಲ್ಲಿ ನೀವು 0-3 ರವರಿಗೆ ರೀ ಜನರೇಟಿವ್ ಬ್ರೇಕಿಂಗ್ ಸಿಸ್ಟಮ್ ಅನ್ನು ನೋಡಬಹುದಾಗಿದೆ. ಇದರಲ್ಲಿರುವಂತಹ ಅಡ್ವಾನ್ಸ್ ಫೀಚರ್ ಮೂಲಕ ಬ್ರೇಕ್ ಪೆಡಲ್ ಅನ್ನು ಬಳಸಿಕೊಳ್ಳದೆ ಡ್ರೈವರ್ ಈ ಕಾರನ್ನು ಡ್ರೈವ್ ಮಾಡುವಾಗ ಗಾಡಿಯ ವೇಗವನ್ನ ಕಡಿಮೆ ಮಾಡಬಹುದಾಗಿದೆ.
Kia EV3 ಎಲೆಕ್ಟ್ರಿಕ್ ಕಾರಿನಲ್ಲಿ ಎರಡು ಬ್ಯಾಟರಿ ಆಪ್ಶನ್ ಅನ್ನು ನೀಡಲಾಗಿದ್ದು ಮೊದಲನೆಯದ್ದು 58.3 ಕಿಲೋ ವ್ಯಾಟ್ ಹಾಗೂ ಎರಡನೆಯದ್ದು 81.4 ಕಿಲೋ ವ್ಯಾಟ್. ಕೇವಲ 7.5 ಸೆಕೆಂಡ್ ನಲ್ಲಿ ಸೊನ್ನೆಯಿಂದ 100 ಕಿಲೋಮೀಟರ್ಗಳ ವೇಗಕ್ಕೆ ಹೋಗುವಂತಹ ಸಾಮರ್ಥ್ಯವನ್ನು ಈ ಕಾರು ಹೊಂದಿದೆ. 170 ಕಿಲೋಮೀಟರ್ ಪ್ರತಿ ಗಂಟೆಯ ವೇಗದಲ್ಲಿ ಕೂಡ ಮ್ಯಾಕ್ಸಿಮಮ್ ಸ್ಪೀಡ್ ಅನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.
Kia EV3 ಕಾರು ಫುಲ್ ಚಾರ್ಜ್ನಲ್ಲಿ 600 ಕಿಲೋಮೀಟರ್ಗಳ ವರೆಗೆ ಮೈಲೇಜ್ ನೀಡಬಹುದೇ ಎನ್ನುವುದಾಗಿ ತಿಳಿದು ಬಂದಿದ್ದು ಇದು ಭಾರತದ ಮಾರುಕಟ್ಟೆಯಲ್ಲಿ 30 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರಾಟ ಆಗಬಹುದು ಎನ್ನುವಂತಹ ನಿರೀಕ್ಷೆ ಇದೆ.