ಮನು ಬಾಕರ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಬಾರಿಯ ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಎರಡೆರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ 120 ವರ್ಷಗಳ ದಾಖಲೆಯನ್ನು ಮುರಿದಿದ್ದಾರೆ. ಇದೇ ಹಿನ್ನೆಲೆಯಲ್ಲಿ Tata Curvv EV ಕಾರ್ ಅನ್ನು ಮನು ಡೆಲಿವರಿ ಪಡೆದುಕೊಂಡಿದ್ದಾರೆ. ಬನ್ನಿ ಕಾರಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
Tata Curvv EV ಕಾರಿನ ಬಗ್ಗೆ ಸಂಪೂರ್ಣ ಮಾಹಿತಿ:
ಈ ಕಾರಿನಲ್ಲಿ ಮೊದಲಿಗೆ ಸುರಕ್ಷತೆಯ ಬಗ್ಗೆ ಮಾತನಾಡುವುದಾದರೆ ಆರು ಏರ್ ಬ್ಯಾಗ್ ಸೇರಿದಂತೆ ADAS ಸಹಿತ 60ಕ್ಕೂ ಹೆಚ್ಚಿನ ಸೇಫ್ಟಿ ಫೀಚರ್ಸ್ ಗಳು ಇವೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಫುಲ್ ಚಾರ್ಜ್ನಲ್ಲಿ Tata Curvv EV ಕಾರ್ 585 km ಗಳ ಮೈಲೇಜ್ ನೀಡುತ್ತದೆ. ಆದರೆ ಬಳಕೆದಾರರು ಹೇಳುವ ಪ್ರಕಾರ ರಿಯಲ್ ಟೈಮ್ ನಲ್ಲಿ 400 ರಿಂದ 425 km ಗಳ ಮೈಲೇಜ್ ಯಾವುದೇ ಅನುಮಾನವಿಲ್ಲದೆ ಸಿಗಲಿದೆ.
ಇದರಲ್ಲಿ 45 ಕಿಲೋವ್ಯಾಟ್ ಗಳ ಬ್ಯಾಟರಿಯಲ್ಲಿ 502 ಹಾಗೂ 55 ಕಿಲೋ ವ್ಯಾಟ್ಗಳ ಗಳ ಸಾಮರ್ಥ್ಯದ ಬ್ಯಾಟರಿಯಲ್ಲಿ 585 km ಮೈಲೇಜ್ ಸಿಗುತ್ತದೆ ಎಂಬ ಮಾಹಿತಿ ಇದೆ. 12.3 ಇಂಚಿನ ಟಚ್ ಸ್ಕ್ರೀನ್ ಸಿಸ್ಟಮ್ ಕೂಡ ಅಳವಡಿಸಲಾಗಿದೆ. 500 ಲೀಟರ್ ಗಳ ಬೂಟ್ ಸ್ಪೇಸ್ ಅನ್ನು ಕೂಡ ನೀವು ಕಾಣಬಹುದಾಗಿದೆ. ಪ್ರತಿ ಗಂಟೆಗೆ 100 ಕಿಲೋಮೀಟರ್ಗಳ ಟಾಪ್ ಸ್ಪೀಡನ್ನು ಕೂಡ ತಲುಪಬಹುದಾಗಿದೆ.
Tata Curvv EV ಕಾರಿನ ಬೆಲೆ:
ಈ ಕಾರಿನ ಬೆಲೆ 17.49 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗಿ ಟಾಪ್ ಮಾಡೆಲ್ 21.99 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯವರೆಗೂ ಕೂಡ ನಿಮಗೆ ಮಾರುಕಟ್ಟೆಯಲ್ಲಿ ದೊರಕಲಿದೆ.