ಸಪ್ಟೆಂಬರ್ 12ರಂದು ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ Maruti Suzuki Swift CNG ಕಾರ್ ಅಧಿಕೃತವಾಗಿ ಲಾಂಚ್ ಆಗಿದೆ. ಇದರಲ್ಲಿ ಪೆಟ್ರೋಲ್ (Petrol) ಹಾಗೂ ಸಿಎನ್ ಜಿ (CNG) ನಡುವೆ ಆಟೋ ಸ್ವಿಚ್ ಆಗುವಂತಹ ಆಯ್ಕೆಯನ್ನು ಕೂಡ ಪರಿಚಯಿಸಲಾಗಿದೆ. ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಹೊಸ ವರ್ಷನ್ ಮೂರು ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
Maruti Suzuki Swift CNG ಯ ಹೊಸ ವರ್ಷನ್ ಬಗ್ಗೆ ಮಾಹಿತಿ:
ಆಟೋಮೆಟಿಕ್ ಕ್ಲೈಮೇಟ್ ಕಂಟ್ರೋಲ್, ವಯರ್ಲೆಸ್ ಚಾರ್ಜರ್, ಏಳು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ನಂತಹ ಅಡ್ವಾನ್ಸ್ ಫೀಚರ್ಗಳು ಕೂಡ ಇದರಲ್ಲಿ ನೀವು ಕಾಣಬಹುದಾಗಿದ್ದು ಕನೆಕ್ಟಿವಿಟಿ ಟೆಕ್ನಾಲಜಿ ಕೂಡ ನೀವು ಪಡೆದುಕೊಳ್ಳಬಹುದು.
ಸಿ ಎನ್ ಜಿ ವರ್ಷನ್ ನಲ್ಲಿ ಮಾರುತಿ ಸುಜುಕಿ ಸಂಸ್ಥೆ 2010 ರಿಂದಲೂ ಎರಡು ಮಿಲಿಯನ್ಗಳಿಗೂ ಅಧಿಕ ಯೂನಿಟ್ಗಳನ್ನ ಮಾರಾಟ ಮಾಡಿರುವಂತಹ ದಾಖಲೆಯನ್ನು ಹೊಂದಿದೆ. ಇನ್ನು ಇಂತಹ ಕಾರುಗಳನ್ನು ಖರೀದಿ ಮಾಡುವಂತಹ ಗ್ರಾಹಕರ ವಯಸ್ಸು ಕೂಡ 20 ರಿಂದ 30ರ ನಡುವೆ ಹೆಚ್ಚಾಗಿದೆ ಎಂಬುದಾಗಿ ಕೂಡ ಸಂಸ್ಥೆ ತನ್ನ ಅಂಕಿ ಅಂಶಗಳನ್ನು ಈ ಸಂದರ್ಭದಲ್ಲಿ ಹೇಳಿಕೊಂಡಿದೆ. ಇನ್ನು ಇದು ಪ್ರತಿ ಕೆಜಿಗೆ ಭರ್ಜರಿ 32.85 ಕಿಲೋಮೀಟರ್ಗಳ ಮೈಲೇಜ್ ಕೂಡ ನೀಡುತ್ತೆ ಎಂಬುದಾಗಿ ಕಂಪನಿ ಹೇಳಿಕೊಂಡಿದೆ.
ತಿಳಿದು ಬಂದಿರುವ ಮಾಹಿತಿ ಪ್ರಕಾರ Maruti Suzuki Swift CNG ಬೆಲೆ 8.20 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸಿ ಎನ್ ಜಿ ಕಾರುಗಳ ಬೇಡಿಕೆ ಹೆಚ್ಚಾದಾಗ ಖಂಡಿತವಾಗಿ ಈ ಕಾರು ಎಲ್ಲರೂ ಫೇವರೆಟ್ ಆಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ ಅನ್ನೋದು ಮಾರುಕಟ್ಟೆಯ ಪರಿಣಿತರ ಅಭಿಪ್ರಾಯ.