ಇಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆಯಂತು ಅಧಿಕ ವಾಗಿದೆ. ವಾಹನಗಳ ಬಳಕೆ ಅಗತ್ಯತೆ ಹೆಚ್ಚು ಇರುವುದರಿಂದ ಮನೆಯಲ್ಲಿ ಒಂದಾದರು ವಾಹನ ಇದ್ದೆ ಇರಲಿದೆ. ಅದರಲ್ಲೂ ರಸ್ತೆಗಳಲ್ಲಿ ನಿತ್ಯವೂ ಹಲವಾರು ವಾಹನಗಳ ಸಂಚಾರ ದಿಂದ ವಾಯು ಮಾಲಿನ್ಯ ಸಮಸ್ಯೆಯಿಂದ ಹಿಡಿದು ಟ್ರಾಫಿಕ್ ಸಮಸ್ಯೆಯು ಹೆಚ್ಚಾಗಿ ಬಿಟ್ಟಿದೆ. ರಸ್ತೆಯಲ್ಲಿ ಓಡಾಡುವ ವಾಹನ ಹೆಚ್ಚಾದಂತೆ ಪರಿಸರದಲ್ಲಿ ಉಂಟಾಗುವ ಮಾಲಿನ್ಯವೂ ಹೆಚ್ಚುತ್ತಿದೆ. ಇಂದು ಹಳೆಯ ವಾಹನಗಳ (Old Vehicle) ಓಡಾಟ ದೊಂದಿಗೆ ಹೊಸ ವಾಹನ ಗಳು ಕೂಡ ಸೇರ್ಪಡೆಯಾಗುತ್ತಿವೆ. ಈ ನಿಟ್ಟಿನಲ್ಲಿ ಸರಕಾರವು ಸ್ಕ್ರ್ಯಾಪ್ ವಾಹನಗಳಿಗೆ ಹೊಸ ರೂಲ್ಸ್ ಜಾರಿ ಮಾಡಿದೆ.
ಹಳೆಯ ವಾಹನ ರದ್ದು:
ವಾಹನಗಳ ವಯಸ್ಸು ಅಂದರೆ ಖರೀದಿ ಸಮಯಕ್ಕೆ ಅನು ಗುಣವಾಗಿ ಸ್ಕ್ರ್ಯಾಪ್ ನಿಗದಿ ಮಾಡಲಾಗಿತ್ತು. ಈಗ ಮಾಲಿನ್ಯದ ಮಟ್ಟವನ್ನು ಅಂದಾಜಿಸಿ ನಿರ್ಣಯ ಮಾಡಲಾಗುತ್ತೆ. ಇನ್ನು ಬರುವ ಹೊಸ ನೀತಿಯಲ್ಲಿ, ಮಾಲಿನ್ಯದ ಮಟ್ಟವನ್ನು ಆಧರಿಸಿ ಇದರ ನಿರ್ಧಾರ ತೆಗೆದು ಕೊಳ್ಳಲಾಗುತ್ತದೆ. ವಾಹನ ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ವಾಹನ ಸ್ಕ್ರ್ಯಾಪ್ ನೀತಿ ತಂದಿರುವಂತದ್ದು ಈ ಮೂಲಕ ದೇಶದಲ್ಲಿರುವ 15 ವರ್ಷ ಹಳೆಯ ವಾಹನಗಳು ರದ್ದಾಗಲಿವೆ.
15 ವರ್ಷ ಹಳೆಯ ವಾಹನಗಳನ್ನು ರಸ್ತೆಯಲ್ಲಿ ಓಡಿಸುವುದು ಸುರಕ್ಷಿತ ಅಲ್ಲ. ಇದರಿಂದಾಗಿ ಯಾವಾ ಗಲೂ ಅಪಘಾತಗಳ ಸಂಖ್ಯೆ ಹೆಚ್ಚು ಆಗುತ್ತದೆ. ಈ ಹಿನ್ನೆಲೆಯಲ್ಲಿ ಹಳೆ ವಾಹನಗಳ (Old Vehicle) ಓಡಾಟವನ್ನು ರದ್ದು ಗೊಳಿಸುವುದು ಗುರಿಯಾಗಿದೆ. ಇನ್ನು ವಾಹನ ಸ್ಕ್ರ್ಯಾಪಿಂಗ್ ಅನ್ನು ಉತ್ತೇಜಿಸಲು, ಸರ್ಕಾರವು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ, ತನ್ನ ವಾಹನ ವನ್ನು ಸ್ಕ್ರಾಪ್ ಮಾಡಲು ವಾಹನ ಮಾಲೀಕರಿಗೆ ಅನೇಕ ಪ್ರಯೋಜನಗಳನ್ನು ಕೂಡ ನೀಡಲಿದೆ.
ರಿಯಾಯಿತಿ ನೀಡಲಿದೆ:
15 ವರ್ಷ ಹಳೆಯ ವಾಹನಗಳನ್ನು ತೆಗೆದುಹಾಕಲು ಮತ್ತು ಹೊಸ ವಾಹನಗಳನ್ನು ಖರೀದಿಸಲು ಮಾಲೀಕರಿಗೆ ರಿಯಾಯಿತಿ ಕೂಡ ನೀಡಲಿದೆ. ಹಳೆಯ ಮತ್ತು ಹೆಚ್ಚು ಮಾಲಿನ್ಯಕಾರಕ ವಾಹನಗಳನ್ನು ರಸ್ತೆಗಿಳಿಯದಂತೆ ಮಾಡುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
ಮರುಬಳಕೆ ಮಾಡಬಹುದು:
ಅದೇ ರೀತಿ, ಸ್ಕ್ರ್ಯಾಪ್ ಮಾಡಿದ ವಾಹನಗಳಿಂದ ಪಡೆದ ವಸ್ತುಗಳನ್ನು ಮರುಬಳಕೆ ಮಾಡ ಬಹುದು. ಸ್ಕ್ರ್ಯಾಪ್ ಮಾಡಿದ ನಂತರ, ಲೋಹ, ರಬ್ಬರ್, ಗಾಜು ಇತ್ಯಾದಿಗಳು ಅವುಗಳಿಂದ ಲಭ್ಯವಿವೆ. ಹೊಸ ವಾಹನಗಳ ತಯಾರಿಕೆಯಲ್ಲಿ ಬಳಕೆ ಮಾಡಬಹುದು.
ಇದೀಗ ಸ್ಕ್ರ್ಯಾಪೇಜ್ ನೀತಿಯನ್ನು ಆಟೋಮೊಬೈಲ್ ಉದ್ಯಮವು ಪ್ರೋತ್ಸಾಹ ಮಾಡ್ತಾ ಇದ್ದು ಹಳೆಯ ವಾಹನಗಳನ್ನು ರದ್ದುಪಡಿಸಿ ಹೊಸ ವಾಹನಗಳನ್ನು ಖರೀದಿಸಲು ಪ್ರೋತ್ಸಾಹ ಧನವನ್ನು ಘೋಷಿಸುದರ ಜೊತೆಗೆ ಇದು ಮಾಲಿನ್ಯ ನಿಯಂತ್ರಣ ಮಾಡಲು ಸಹಕಾರಿ ಯಾಗಲಿದೆ.