ಪೆಟ್ರೋಲ್ ಬೆಲೆಯ ವಿರುದ್ಧ ಹಾಗೂ ಪರಿಸರ ಮಾಲಿನ್ಯದ ವಿರುದ್ಧ ಭಾರತ ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ತನ್ನ ಬದಲಾವಣೆಯ ನಿಲುವನ್ನು ತೋರಿಸುತ್ತಿದೆ. ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ಉತ್ತಮ ಮೈಲೇಜ್ ನೀಡುವಂತಹ ಎಲೆಕ್ಟ್ರಿಕ್ ಬೈಕುಗಳ ಬಗ್ಗೆ ನಿಮಗೆ ತಿಳಿಸುವುದಕ್ಕೆ ಹೊರಟಿದ್ದು ಬನ್ನಿ ಈ ಸಾಲಿನಲ್ಲಿ ಯಾವೆಲ್ಲ ಎಲೆಕ್ಟ್ರಿಕ್ ಬೈಕ್ ಗಳು (Electric Bikes) ಕಾಣಿಸಿಕೊಳ್ಳುತ್ತವೆ ಎಂಬುದನ್ನು ತಿಳಿಯೋಣ.
OLA Roadster Series:
OLA Roadster Series ಇತ್ತೀಚಿಗಷ್ಟೇ ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವಂತಹ ಎಲೆಕ್ಟ್ರಿಕ್ ಬೈಕ್ (Electric Bike) ಆಗಿದೆ. ಇದರ ಬೇಸ್ ಮಾಡೆಲ್ ಬೆಲೆ 75,000 ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗಲಿದೆ. ಇದರ ಟಾಪ್ ಸ್ಪೀಡ್ 126 ಕಿಲೋಮೀಟರ್ ಆಗಿದ್ದು ಇದರಲ್ಲಿ 13 ಕಿಲೋ ವ್ಯಾಟ್ ನ ಮೋಟಾರ್ ಅಳವಡಿಸಲಾಗಿದೆ.
Oben Rorr:
Oben Rorr ನಲ್ಲಿ ಎಂಟು ಕಿಲೋ ವ್ಯಾಟ್ಗಳ ಮೋಟರ್ ಅಳವಡಿಸಲಾಗಿದೆ. ಇದರ ಟಾಪ್ ಸ್ಪೀಡ್ 100 ಕಿಲೋಮೀಟರ್ ಪ್ರತಿ ಗಂಟೆಯಾಗಿದೆ. ಎರಡು ಗಂಟೆಯಲ್ಲಿ ಫುಲ್ ಚಾರ್ಜ್ ಮಾಡಬಹುದಾಗಿದ್ದು, ಇದು ನಿಮಗೆ 187 ಕಿಲೋಮೀಟರ್ಗಳ ಮೈಲೇಜ್ ನೀಡುತ್ತೆ. ಇದರ ಬೆಲೆ 1.49 ಲಕ್ಷ ರೂಪಾಯಿ.
Revolt RV400:
Revolt RV400 ಎಲೆಕ್ಟ್ರಿಕ್ ಬೈಕ್ 45 km ಗಳ ಟಾಪ್ ಸ್ಪೀಡ್ ನಲ್ಲಿ ಚಲಿಸುತ್ತದೆ ಹಾಗೂ ಇದರಲ್ಲಿ ನೀವು ಪಡೆದುಕೊಳ್ಳುವಂತಹ ಮೈಲೇಜ್ 150km ಆಗಿದೆ. ಈ ಎಲೆಕ್ಟ್ರಿಕ್ ಬೈಕ್ 1.27 ಲಕ್ಷ ರೂಪಾಯಿಗಳ ಬೆಲೆಯಿಂದ ಪ್ರಾರಂಭವಾಗುತ್ತದೆ.
Okaya Ferrato Disruptor:
Okaya Ferrato Disruptor ಎಲೆಕ್ಟ್ರಿಕ್ ಬೈಕಿನ ಬಗ್ಗೆ ಮಾತನಾಡುವುದಾದರೆ ಇದು 1.59 ಲಕ್ಷರೂಪಾಯಿಗಳ ಬೆಲೆಗೆ ಸಿಗುತ್ತೆ ಹಾಗೂ 123 ಕಿಲೋಮೀಟರ್ಗಳ ರೇಂಜ್ ಅನ್ನು ನೀಡುತ್ತದೆ.
Ultraviolette F77 Mach 2:
Ultraviolette F77 Mach 2 Electric Bike ನಿಮಗೆ ಬರೋಬ್ಬರಿ 323 ಕಿಲೋಮೀಟರುಗಳ ರೇಂಜ್ ನೀಡುತ್ತದೆ. ಇದು ನಿಮಗೆ 2.99 ಲಕ್ಷರೂಪಾಯಿಗಳ ಬೆಲೆಯಲ್ಲಿ ಸ್ಟಾರ್ಟ್ ಆಗುತ್ತೆ.