ಟಾಟಾ ಸಂಸ್ಥೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಮಾರುಕಟ್ಟೆಯಲ್ಲಿ ಅತ್ಯಂತ ನಂಬಿಕಸ್ಥ ಹಾಗೂ ಭರವಸೆಯ ಬ್ರಾಂಡ್ ಆಗಿದೆ. ಅದರಲ್ಲೂ ವಿಶೇಷವಾಗಿ ಈಗ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು Tata Tigor ಕಾರಿನ ಬಗ್ಗೆ.
Tata Tigor ಕಾರಿನ 2024ರ ಮಾಡೆಲ್ ಮೇಲೆ 55,000 ರೂಪಾಯಿಗಳ ಆಫರ್ ಸಿಕ್ತಾ ಇದೆ. ಒಂದು ವೇಳೆ ನೀವು 2023 ಮಾಡೆಲ್ ಅನ್ನು ಆಯ್ಕೆ ಮಾಡಿದರೆ ಹೆಚ್ಚುವರಿ ಕ್ಯಾಶ್ ರೂಪದ 30,000 ರೂಪಾಯಿಗಳ ರಿಯಾಯಿತಿ ಸಿಗುತ್ತೆ. ಅಂದರೆ ಒಟ್ಟಾರೆ 85,000 ರೂಪಾಯಿಗಳ ರಿಯಾಯಿತಿಯನ್ನು ನೀವು ಈ ಖರೀದಿಯ ಮೇಲೆ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ ಬನ್ನಿ ಈ ಕಾರಿನ ಬಗ್ಗೆ ಇರುವಂತಹ ಕೆಲವೊಂದು ಪ್ರಮುಖ ಮಾಹಿತಿಗಳನ್ನು ತಿಳಿದುಕೊಳ್ಳೋಣ.
Tata Tigor ಕಾರಿನ ಫೀಚರ್ಸ್ಗಳು:
- ಏಳು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಜೊತೆಗೆ ಆಂಡ್ರಾಯ್ಡ್ ಹಾಗೂ ಆಪಲ್ ಕಾರ್ ಪ್ಲೇಯನ್ನು ಕೂಡ ನೀವು ಪಡೆದುಕೊಳ್ಳಬಹುದು.
- ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ. ಫ್ರಂಟ್ ಡ್ಯುಯಲ್ ಏರ್ ಬ್ಯಾಗ್ ಗಳನ್ನು ಕೂಡ ಸುರಕ್ಷತೆಯ ದೃಷ್ಟಿಯಲ್ಲಿ ಅಳವಡಿಸಲಾಗಿದೆ.
- 1.2 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಅಳವಡಿಸಲಾಗಿದೆ. ಐದು ಸ್ಪೀಡ್ ಮಾನ್ಯುಯಲ್ ಹಾಗೂ ಐಧು ಸ್ಪೀಡ್ ಆಟೋಮೆಟಿಕ್ ಗೇರ್ ಆಪ್ಷನ್ ಕೂಡ ಇದೆ.
- ಇದರ ಬೆಲೆ 6.30 ರಿಂದ 9.55 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ನಿಮಗೆ ದೊರಕುತ್ತದೆ.
- ಪೆಟ್ರೋಲ್ ವೇರಿಯಂಟ್ ನಲ್ಲಿ 19.28ರಿಂದ 19.60 ಕಿಲೋ ಮೀಟರ್ ವರೆಗು ಕೂಡ ಮೈಲೇಜ್ ನೀಡುತ್ತದೆ. ಸಿಎನ್‌ಜಿ ನಲ್ಲಿ 26 ರಿಂದ 28 ಕಿಲೋಮೀಟರ್ಗಳ ವರೆಗೆ ಮೈಲೇಜ್ ಸಿಗುತ್ತದೆ.