ಓಲಾ (Ola) ಸಂಸ್ಥೆ ಭಾರತದ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಮಾರುಕಟ್ಟೆಯಲ್ಲಿ ತನ್ನದೇ ಆದಂತಹ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿದ್ದು ಅದರಲ್ಲೂ ವಿಶೇಷವಾಗಿ 2024ನೇ ಇಸ್ವಿಯ ಮೊದಲ ಅರ್ಧದಲ್ಲಿ 2.28ಕ್ಕೂ ಲಕ್ಷ ವೆಹಿಕಲ್ ಗಳನ್ನು ರಿಜಿಸ್ಟರ್ ಮಾಡಿಕೊಂಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಗಳ ಮಾರುಕಟ್ಟೆಯ 46 ಪ್ರತಿಶತ ಭಾಗವನ್ನು ತನ್ನಲ್ಲಿ ಹೊಂದಿದ್ದು ಅತ್ಯಂತ ದೊಡ್ಡ ಕಂಪನಿಯಾಗಿ ಹೊರಹೊಮ್ಮಿದೆ.
ಈಗಾಗಲೇ ಓಲಾ ಸಂಸ್ಥೆ S1 Pro ಹಾಗೂ S1 Air ಸ್ಕೂಟರ್ಗಳ ಆರು ವೇರಿಯಂಟ್ಗಳನ್ನು ನೀವು ಮಾರುಕಟ್ಟೆಯಲ್ಲಿ ನೋಡಬಹುದಾಗಿದೆ. ಈಗ ಓಲಾ (Ola) ಸಂಸ್ಥೆ ಎಲ್ಲರಿಗೂ ಒಂದು ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಯಾವುದೇ ಹೆಚ್ಚಿನ ಖರ್ಚಿಲ್ಲದೆ ಬ್ಯಾಟರಿಯ ಮೇಲೆ ಎಂಟು ವರ್ಷ ಅಥವಾ 80000 ಕಿಲೋಮೀಟರ್ಗಳ ವರೆಗೆ ವಾರಂಟಿಯನ್ನು ನೀಡುವುದಕ್ಕೆ ಹೊರಟಿದೆ.
ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಗಳ ಮಾರುಕಟ್ಟೆಯಲ್ಲಿ ಖಂಡಿತವಾಗಿ ಇದೊಂದು ಕ್ರಾಂತಿಕಾರಿ ಘೋಷಣೆ ಹಾಗೂ ಬದಲಾವಣೆ ಎಂದು ಹೇಳಬಹುದಾಗಿದೆ. ಇದರಿಂದಾಗಿ ಓಲಾ (Ola) ಸಂಸ್ಥೆ ತನ್ನ ಗ್ರಾಹಕರಲ್ಲಿ ಭರವಸೆಯನ್ನು ಕೂಡ ಹೆಚ್ಚಿಸುವಂತಹ ಕೆಲಸವನ್ನು ಮಾಡೋದಕ್ಕೆ ಹೊರಟಿದೆ ಅನ್ನೋದನ್ನ ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳ ಬೇಕಾಗಿರುತ್ತದೆ.
ಎಲ್ಲಕ್ಕಿಂತ ಪ್ರಮುಖವಾಗಿ ಓಲಾ ಸಂಸ್ಥೆ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಗ್ರಾಹಕರ ಅಭಿರುಚಿಗೆ ತಕ್ಕಂತೆ ಲಾಂಚ್ ಮಾಡುವಂತಹ ಪ್ಲಾನಿಂಗ್ ಅನ್ನು ಕೂಡ ಹೊಂದಿದೆ.
ಇದು ಅಡ್ವಾನ್ಸ್ ಟೆಕ್ನಾಲಜಿಯನ್ನು ಹೊಂದಿರಬಹುದು, ಅಥವಾ ಗ್ರಾಹಕರ ಬಜೆಟ್ಗೆ ತಕ್ಕಂತೆ ದ್ವಿಚಕ್ರ ವಾಹನಗಳನ್ನು ಅವರಿಗೆ ತಲುಪಿಸುವಂತಹ ಉದ್ದೇಶವೇ ಆಗಿರಬಹುದು ಎಲ್ಲದರಲ್ಲೂ ಕೂಡ ಓಲಾ ಸಂಸ್ಥೆ ಗ್ರಾಹಕರಿಗೆ ಅಂದುಕೊಂಡ ರೀತಿಯಲ್ಲಿ ಫಲಿತಾಂಶವನ್ನು ನೀಡುವಂತಹ ಪ್ರಯತ್ನಕ್ಕೆ ಮುಂದಾಗುವುದಕ್ಕೆ ಹೊರಟಿದೆ.