ಮಾರುಕಟ್ಟೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಎಲೆಕ್ಟ್ರಿಕ್ ವಾಹನಗಳಿಗೆ ಅತ್ಯಂತ ಹೆಚ್ಚಿನ ಬೇಡಿಕೆ ಇದೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ಪ್ರೊಡಕ್ಷನ್ ಗೆ ಸಿದ್ಧವಾಗಿರುವಂತಹ ಹಾಗೂ ಅತಿ ಶೀಘ್ರದಲ್ಲಿ ಡೆಲಿವರಿ ಆಗುವಂತಹ ಸಾಧ್ಯತೆಯನ್ನು ಹೊಂದಿರುವ BGauss RUV350 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಹೊಸ ಸ್ಟ್ಯಾಂಡರ್ಡ್ ಜೊತೆಗೆ ಬರುತ್ತಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
BGauss RUV350 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಸಂಪೂರ್ಣ ಮಾಹಿತಿ:
BGauss RUV350 ಸಿಂಗಲ್ ಚಾರ್ಜ್ ನಲ್ಲಿ ನಿಮಗೆ 145 km ಗಳ ವರೆಗೆ ರೇಂಜ್ ನೀಡುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದು ಪ್ರತಿ ಗಂಟೆಗೆ 75kmಗಳ ಟಾಪ್ ಸ್ಪೀಡ್ ಅನ್ನು ಕೂಡ ತನ್ನ ಚಾಲಕರಿಗೆ ನೀಡಲಿದೆ. 16 ಇಂಚುಗಳ ಅಲಾಯ್ ವೀಲ್ ಅನ್ನು ಕೂಡ ನೀವು ಇದರಲ್ಲಿ ಕಾಣಬಹುದಾಗಿದೆ. 20 ಲೀಟರ್ಗಳ ಬೂಟ್ ಸ್ಪೇಸ್ ಕೂಡ ಸಿಗಲಿದೆ. ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ 5 ಇಂಚಿನ ಟಿ.ಎಫ್.ಟಿ. ಸ್ಕ್ರೀನ್ ಕೂಡ ಇದೆ.
ಈ ಎಲೆಕ್ಟ್ರಿಕ್ ಸ್ಕೂಟರ್ ನ ಬೆಲೆ ಬೇಸಿಕ್ ವರ್ಷನ್ 1 ಲಕ್ಷಗಳಿಂದ ಪ್ರಾರಂಭಿಸಿ ಟಾಪ್ ವೇರಿಯಂಟ್ 1.30 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲಿ ದೊರಕಲಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಈ ವಿಚಾರದ ಬಗ್ಗೆ ಕಂಪನಿ ಯಾವುದೇ ರೀತಿಯಲ್ಲಿ ಅಧಿಕೃತ ಮಾಹಿತಿ ಹೊರ ಹಾಕಿಲ್ಲ ಆದ್ರೆ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇದೇ ರೀತಿಯಲ್ಲಿ ವಾಹನ ಲಾಂಚ್ ಆದಾಗ ಬೆಲೆ ಕಂಡು ಬರಬಹುದು ಎನ್ನುವುದಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಪರಿಣಿತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.